
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ 4ನೇ ದಿನವೂ ಮುಂದುವರೆದಿದ್ದು, ಸದ್ಯ ಉಕ್ರೇನ್ ದೇಶವನ್ನು ರಷ್ಯಾ ಸೇನಾಪಡೆ ಅಕ್ಷರಶಃ ಬಗ್ಗು ಬಡಿಯುತ್ತಿದೆ. ಅಲ್ಲಿನ ನಾಗರಿಕರಲ್ಲದೇ ವಿದೇಶಿಗರೂ ಸಹ ಉಕ್ರೇನ್‌ನಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಈ ಪೈಕಿ ಕರ್ನಾಟಕದ ಅನೇಕ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದು, ಇಂದು ಬೆಳಗ್ಗೆ 12 ವಿದ್ಯಾರ್ಥಿಗಳು ವಾಪಾಸ್ ಆಗಿದ್ದಾರೆ.

ಕರ್ನಾಟಕದ 12 ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ಸಾಗಿದ್ದು, ವಿದ್ಯಾರ್ಥಿಗಳನ್ನ ಕಂದಾಯ ಸಚಿವ ಆರ್ ಆಶೋಕ್ ಸ್ವಾಗತಿಸಿದ್ದಾರೆ. ಯುದ್ದದ ಕಾರಣದಿಂದ ಸಿಲುಕಿಕೊಂಡಿದ್ದ ಕನ್ನಡಿಗರು ಊಟಕ್ಕಾಗಿ ಸಹ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ರಾತ್ರಿ ಮುಂಬೈ ತಲುಪಿದ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿತ್ತು.

ಇಂದು ಬೆಳಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಎಕ ಬಂದ ವಿದ್ಯಾರ್ಥಿಗಳನ್ನ ಕಂದಾಯ ಸಚಿವ ಆರ್.ಅಶೋಕ್ ಭೇಟಿ ಮಾಡಿ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದರು. ಜೊತೆಗೆ ಏರ್ಪೋರ್ಟ್ ಲಾಂಚ್ನಲ್ಲೇ ವಿದ್ಯಾರ್ಥಿಗಳಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡಿದರು.

ಕರ್ನಾಟಕ ಸೇರಿದಂತೆ ಅನೇಕ ಭಾರತೀಯರು ಇನ್ನೂ ಉಕ್ರೇನ್ನಲ್ಲೇ ಸಿಲುಕಿಕೊಂಡಿದ್ದಾರೆ. ಉಕ್ರೇನ್ನ ಕಾರ್ಕಿವ್ ಪ್ರದೇಶದಲ್ಲಿ ಕರ್ನಾಟಕದ ಮತ್ತಷ್ಟು ವಿದ್ಯಾರ್ಥಿಗಳು ಪರದಾಡುತ್ತಿದ್ದು ಆದಷ್ಟು ಭೇಗ ಅವರನ್ನು ಕರ್ನಾಟಕಕ್ಕೆ ಕರೆತರುವ ಭರವಸೆಯನ್ನ ಆರ್.ಅಶೋಕ್ ನೀಡಿದ್ದಾರೆ.




