
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಲು ವಿದ್ಯಾರ್ಥಿನಿ ಕಾಜಲ್ ಮ್ಯಾರಥಾನ್ ಮಾಡುತ್ತಿದ್ದಾರೆ. ಅದು ಬರೋಬ್ಬರೀ 200 ಕಿ.ಮೀ.. ಪ್ರಯಾಗ್ ರಾಜ್ ನಿಂದ ಸಿಎಂ ಯೋಗಿ ನಿವಾಸ ಇರುವ ಲಕ್ನೋದತ್ತ ಹೊರಟಿದ್ದಾಳೆ. ಏಪ್ರಿಲ್ 10 ರಂದು ಮ್ಯಾರಥಾನ್ ಗೆ ಚಾಲನೆ ಸಿಕ್ಕಿದ್ದು, ಕಾಜಲ್ ಪ್ರಯಾಗ್ ರಾಜ್‌ನಿಂದ ಉತ್ತರ ಪ್ರದೇಶದ ರಾಜಧಾನಿ ಲಕ್ನೋವರೆಗೆ 200 ಕಿ.ಮೀ ಮ್ಯಾರಥಾನ್ ಆರಂಭಿಸಿದ್ದಾಳೆ. ಏಪ್ರಿಲ್ 17 ರಂದು ಸಿಎಂ ಯೋಗಿ ಆದಿತ್ಯನಾಥ್ ನಿವಾಸ ತಲುಪಲಿದ್ದಾಳೆ.
4ನೇ ತರಗತಿ ಓದುತ್ತಿರುವ 10 ವರ್ಷದ ಕಾಜಲ್ ಗೆ ಅಥ್ಲೀಟ್ ಆಗಬೇಕು ಎಂಬ ಮಹತ್ವಾಕಾಂಕ್ಷೆ ಇದೆ. ಅದಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ್ ಭೇಟಿಯಾಗಲು ಮ್ಯಾರಥಾನ್ ಕೈಗೊಂಡಿದ್ದಾಳೆ. ಅಥ್ಲೀಟ್ ಆಗಬೇಕೆಂಬುದು ನನ್ನ ಮಹತ್ವಾಕಾಂಕ್ಷೆ ಎಂದು ಕಾಜಲ್ ಹೇಳಿದ್ದಾಳೆ. ಅಥ್ಲೀಟ್ ಆಗಲು ಮತ್ತು ದೇಶದಲ್ಲಿ ಹೆಸರು ಗಳಿಸಲು ಬೇಕಾದ ಸಂಪನ್ಮೂಲಗಳೊಂದಿಗೆ ಮ್ಯಾರಥಾನ್ ಆರಂಭಿಸಿದ್ದೇನೆ, ಸಿಎಂ ಯೋಗಿ ಅವರು ಸಹಾಯ ಮಾಡುತ್ತಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾಳೆ.
ಅಂದ ಹಾಗೇ ಈ ಪುಟಾಣಿ, ಇಂದಿರಾ 2021 ರಲ್ಲಿ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು. ಆದರೆ ಈವರೆಗೂ ಜಿಲ್ಲಾಡಳಿತ ಮತ್ತು ಅವರ ಶಾಲೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸದ್ಯ ಬೇಸಿಗೆ ಆಗಿರೋದ್ರಿಂದ ಬಿಸಿಲು ಮೈ ಸುಡುತ್ತಿದೆ. ಇಂಥ ದಗೆಯಲ್ಲೂ ಪೋರಿ ಕಾಜಲ್ ತಮ್ಮ ಗುರಿ ಈಡೇರಿಸಿಕೊಳ್ಳಲು ಸಿಎಂ ಭೇಟಿಗಾಗಿ ಓಟ ಆರಂಭಿಸಿದ್ದಾರೆ. ಬಿಸಿಲಿನ ತೀವ್ರತೆ ಹೆಚ್ಚಿರುವುದರಿಂದ ಪ್ರತಿದಿನ ಬೆಳಗ್ಗೆ 5ರಿಂದ ರಾತ್ರಿ 8ರವರೆಗೆ. ಸಂಜೆ 5ರಿಂದ 7ರವರೆಗೆ ಓಡುತ್ತಾರೆ. ಉಳಿದ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತಾರೆ.
ಕಳೆದ ವರ್ಷ ಇಲ್ಲಿನ ಇಂದಿರಾ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದ 4ನೇ ತರಗತಿ ವಿದ್ಯಾರ್ಥಿನಿ ಕಾಜಲ್ ಭಾನುವಾರ ಪ್ರಯಾಗರಾಜ್‌ನಿಂದ ಲಕ್ನೋಗೆ ಓಟ ಆರಂಭಿಸಿದ್ದರು. ಅಥ್ಲೀಟ್ ಆಗಬೇಕೆಂಬ ಹಂಬಲ ಹೊಂದಿರುವ ಕಾಜಲ್ ಏಪ್ರಿಲ್ 17ರಂದು ಲಕ್ನೋದಲ್ಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸಕ್ಕೆ ಆಗಮಿಸಲಿದ್ದಾರೆ.



