Latestಚರ್ಚೆರಾಜಕೀಯರಾಷ್ಟ್ರೀಯಸುದ್ದಿ

ಪಂಜಾಬ್‌ನ ಹೊಸ ಆಪ್ ಸರ್ಕಾರದಲ್ಲಿ 10 ಸಚಿವರು ಪ್ರಮಾಣ ವಚನ

ಚಂಡೀಘಡ: ಇಂದು ಮಧ್ಯಹ್ನಾ ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಗವಂತ್ ಮಾನ್ ಮಂತ್ರಿಗಳ ಪಟ್ಟಿಯಲ್ಲಿರೋ ಹತ್ತು ಮಂದಿ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕರಿಸಿದವರ ಪಟ್ಟಿ ಇಂತಿದೆ

ಹರ್ಪಲ್ ಸಿಂಗ್ ಚೀಮಾ: ಎರಡು ಬಾರಿ ದಿರ್ಬಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಬಲಜೀತ್ ಕೌರ್: ಸಂಸದ ಸಾಧು ಸಿಂಗ್ ಪುತ್ರಿಯಾಗಿರುವ ಇವರು ಮಲೌಟ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಹರ್ಭಜನ್ ಸಿಂಗ್: ಜಂಧಿಯಾಲಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ

ಇನ್ನುಳಿದಂತೆ ಮನ್ಸಾ ಕ್ಷೇತ್ರದ ಎಂಎಲ್ ಎ ವಿಜಯ್ ಸಂಗ್ಲಾ, ಭೋವಾ ಕ್ಷೇತ್ರದಿಂದ ಆಯ್ಕೆಯಾಗಿರುವ ಲಾಲ್ ಚಂದ್ ಕಟುರ್ ಚೌಕ್, ಗುರುಮೀತ್ ಸಿಂಗ್ ಮೀತ್ ಹೈಯರ್, ಕುಲದೀಪ್ ಸಿಂಗ್ ದಾಲಿಯವಾಲಾ, ಲಲಿತ್ ಸಿಂಗ್ ಭುಲ್ಲಾರ್, ಬ್ರಹ್ಮಶಂಕರ್ ಜಿಂಪಾ, ಹಾಗೂ ಅತಿ ಕಿರಿಯ ವಯಸ್ಸಿನ ಸಚಿವ ಎನಿಸಿಕೊಂಡಿರುವ ಆನಂದ್ ಪುರ್ ಸಾಹೇಬ ಕ್ಷೇತ್ರದಿಂದ ಆಯ್ಕೆಯಾಗಿರುವ ಹರ್ಜೋತ್ ಸಿಂಗ್ ಬೈನ್ಸ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮುಖ್ಯಮಂತ್ರಿ ಭಗವಂತ್ ಮಾನ್ ಇದೇ ಮಾರ್ಚ್ 16ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇಂದು ಪ್ರಮಾಣ ವಚನ ಸ್ವೀಕರಿಸಿದವರಿಗೆ ಸಭಾಪತಿ ಇಂದರ್​ಬೀರ್ ಸಿಂಗ್ ನಿಜ್ಜಾರ್ ಪ್ರಮಾಣ ವಚನ ಭೋದಿಸಿದರು. ಇಡೀ ಪಂಜಾಬನ್ನೇ ಪ್ರಗತಿಯತ್ತ ಕೊಂಡೋಯ್ಯುವ ಕನಸು ಹೊಂದಿರುವ ಆಮ್ ಆದ್ಮಿ ಪಾರ್ಟಿಯ ನೂತನ ಸಚಿವರಿಗೆ ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಶುಭಕೋರಿದರು

Spread the love

Related Articles

Leave a Reply

Your email address will not be published. Required fields are marked *

Back to top button