Latestಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ
ಧಾರವಾಡ ಜಿಲ್ಲೆಯಲ್ಲಿ ಏರುತ್ತಲೇ ಇವೆ ಕೊರೋನಾ ಪ್ರಕರಣಗಳು

ಧಾರವಾಡ: ಧಾರವಾಡದ ಜಿಲ್ಲೆಯಲ್ಲಿ ಕೋವಿಡ್-19 ಸೋಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಶನಿವಾರ ಒಂದೇ ದಿನಕ್ಕೆ 648 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಇಂದಿನ ಹೆಲ್ತ್ ಬುಲೆಟಿನ್‌ಲ್ಲಿ ಅಧಿಕೃತ ಮಾಹಿತಿ ಲಭ್ಯವಾಗಿದ್ದು, ಹೊಸ ಸೋಕಿತರೊಂದಿಗೆ ಈಗ ಜಿಲ್ಲೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,920 ಕ್ಕೆ ಏರಿಕೆಯಾಗಿದೆ.
ಇನ್ನೂ ಜಿಲ್ಲೆಯಲ್ಲಿ ಶನಿವಾರ 76 ಜನ ಕೋವಿಡ್ -19 ಸೋಂಕಿನಿಂದ ಗುಣಮುಖರಾಗಿದ್ದು, ಅವರನ್ನು ಬಿಡುಗಡೆ ಮಾಡಲಾಗಿದೆ. ಜೊತೆಗೆ 5 ಜನ ಕೊರೊನಾ ಸೋಕಿತರಿಗೆ ನಿಗದಿತ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಧಾರವಾಡ ಜಿಲ್ಲೆಯ ಜನತೆ ಮಾಸ್ಕ್, ಸಮಾಜಿಕ ಅಂತರ ಹಾಗೂ ಹ್ಯಾಂಡ್ ವಾಶ್ ಕಡೆಗೆ ಹೆಚ್ಚಿನ ಗಮನ ನೀಡುವ ಮೂಲಕ ವೈರಸ್ ಹರಡುವಿಕೆ ತಡೆಯಲು ಕೈಜೋಡಿಸಲು ನಮ್ಮ ಮನವಿ, ಭಯ ಬೀಡಿ ವೈರಸ್ ಕುರಿತು ಜಾಗೃತಿ ಇರಲಿ.



