ಭಾವಿ ಪತ್ನಿ ಕತ್ರಿನಾ ಕೈಫ್ ಗಾಗಿ ಹೊಸ ಮನೆ ಖರೀದಿಸಿದ ವಿಕ್ಕಿ ಕೌಶಾಲ್

ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಾಲ್ ಅವರು ಮುಂದಿನ ತಿಂಗಳು ಮದುವೆಯಾಗಲಿದ್ದಾರೆ. ಅದಕ್ಕಾಗಿ ಈ ಜೋಡಿ ಮುಂಬೈನ ಜುಹು ಪ್ರದೇಶದಲ್ಲಿ ಐಷರಾಮಿ ಅಪಾರ್ಟ್ ಮೆಂಟ್ ಒಂದನ್ನು ಬಾಡಿಗೆಗೆ ಪಡೆದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ವಿಕ್ಕಿ ಕೌಶಾಲ್ ಅವರು ಜುಹುವಿನ ರಾಜಮಹಲ್ ನಲ್ಲಿ ಐಷರಾಮಿ ಕಟ್ಟಡವನ್ನು 60 ತಿಂಗಳ ಅವಧಿಗೆ ಅಂದರೆ 5 ವರ್ಷಗಳ ಅವಧಿಗೆ ಬಾಡಿಗೆಗೆ ಪಡೆದಿದ್ದಾರೆ. ಅವರು 8ನೇ ಮಹಡಿಯ ಅಪಾರ್ಟ್ ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದು, ವಿಕ್ಕಿ ಕೌಶಾಲ್ ಅವರು ಪಾವತಿಸಿದ ಭದ್ರತಾ ಠೇವಣಿ ಸುಮಾರು 1.75 ಕೋಟಿ ರೂ.ಗಳು ಮತ್ತು ಆರಂಭಿಕ 36 ತಿಂಗಳ ಬಾಡಿಗೆ ತಿಂಗಳಿಗೆ 8 ಲಕ್ಷರೂ, ಮುಂದಿನ 12 ತಿಂಗಳಿಗೆ 8.40ಲಕ್ಷ ರೂ. ಉಳಿದ 12 ತಿಂಗಳಿಗೆ 8.82 ಲಕ್ಷ ಬಾಡಿಗೆ ನೀಡಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ವಿಕ್ಕಿ ಕೌಶಾಲ್ ಮತ್ತು ಕತ್ರಿನಾ ಕೈಫ್ ಡಿಸೆಂಬರ್ ನಲ್ಲಿ ರಾಜಸ್ಥಾನದಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ದಂಪತಿಗಳು ತಮ್ಮ ಕೆಲಸದ ಕಾರಣ ಹನಿಮೂನ್ ತ್ಯಜಿಸಿದ್ದಾರೆ ಎನ್ನಲಾಗುತ್ತಿದೆ. ಮದುವೆಯ ಬಳಿಕ ಕತ್ರಿನಾ ಕೈಫ್ ಟೈಗರ್ 3 ಚಿತ್ರೀಕರಣವನ್ನು ಪುನರಾರಂಭಿಸಲಿದ್ದಾರೆ ಎನ್ನಲಾಗುತ್ತಿದೆ




