ರೆಟ್ರೋ ಲುಕ್ನಲ್ಲಿ ರ್ಯಾಪರ್ ಚಂದನ್ ಶೆಟ್ಟಿ

ಕಳೆದ ಕೆಲ ದಿನಗಳಿಂದ ಗಾಯಕ ಚಂದನ್ ಶೆಟ್ಟಿ ರೆಟ್ರೋ ಲುಕ್ನಲ್ಲಿ ಕಾಣಿಸಿಕೊಂಡಿದ್ದ ಪೋಟೋ ವೈರಲ್ ಆಗಿತ್ತು. ಫೋಟೋ ನೋಡಿದವ್ರು ಚಂದನ್ ಸಿನಿಮಾ ಮಾಡ್ತಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ರು. ಇದೀಗ ಚಂದನ್ ಅದೆಲ್ಲದಕ್ಕೂ ಉತ್ತರ ನೀಡಿದ್ದು ಎಲ್ರ ಕಾಲೆಳೆಯುತ್ತೆ ಕಾಲ ಅಂತಿದ್ದಾರೆ.
ಮ್ಯೂಸಿಕ್ ಮಾಡಿಕೊಂಡಿದ್ದ ನಟ ಚಂದನ್ ಶೆಟ್ಟಿ ಆಗಾಗ ಆಲ್ಬಮ್ ಸಾಂಗ್ಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ರಚಿತಾ ರಾಮ್ ಜೊತೆ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದ ಚಂದನ್ ಇದೀಗ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಮೊದಲ ಸಿನಿಮಾದಲ್ಲೇ ಬೆಲ್ ಬಾಟಮ್ ತೊಟ್ಟು ಡಿಫರೆಂಟ್ ಲುಕ್ನಲ್ಲಿ ಕಾಣಿಸಿಕೊಂಡಿರೋ ಚಂದನ್ ಎಲ್ರ ಕಾಲೆಳೆಯುತ್ತೆ ಕಾಲ ಅಂತಿದ್ದಾರೆ.
ಸುಜಯ್ ಶಾಸ್ತ್ರಿ ನಿರ್ದೇಶನದ ಎಲ್ರ ಕಾಲೆಳೆಯುತ್ತೆ ಕಾಲ ಶೀರ್ಷಿಕೆಯ ಸಿನಿಮಾದಲ್ಲಿ ಚಂದನ್ ಕಾಣಿಸಿಕೊಳ್ತಿದ್ದು ವಿಜಯ್ ಎಂಬ ಕಾಲೇಜು ಲೆಕ್ಚರರ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇದುವರೆಗೂ ಸಂಗೀತ ನಿರ್ದೇಶಕನಾಗಿ, ರ್ಯಾಪರ್ ಆಗಿದ್ದ ಚಂದನ್ ಇದೀಗ ಸಿನಿಮಾ ಅನ್ನೋ ಮಹಾಸಾಗಕ್ಕೆ ದುಮುಕಿದ್ದಾಗಿ ಹೇಳಿದ್ದಾರೆ.




