Latestಮನರಂಜನೆಸಿನಿಮಾಸೆಲೆಬ್ರಿಟಿ
ಹ್ಯಾಪಿ ಬರ್ತಡೇ ಮೈ ಲವ್ ಎಂದ ಸುದೀಪ್ ಪುತ್ರಿ

ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸುದೀಪ್ ಸಿನಿಮಾಗಾಗಿ ಅವ್ರ ಫ್ಯಾನ್ಸ್ ಕಾಯ್ತಾ ಇರ್ತಾರೆ. ಆದ್ರೆ ಸುದೀಪ್ ಪುತ್ರಿ ಮಾತ್ರ ಬೇರೊಬ್ಬ ನಟನ ಅಭಿಮಾನಿಯಂತೆ. ಆತನ ಬರ್ತಡೇಗೆ ಸೋಷಿಯಲ್ ಮೀಡಿಯಾದಲ್ಲಿ ಸಾನ್ವಿ ವಿಶ್ ಮಾಡಿದ್ದು ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗ್ತಿದೆ.
ಸುದೀಪ್ ಪುತ್ರಿ ಸಾನ್ವಿ ಬಾಲಿವುಡ್ ನಟ ಸಿದ್ಧಾರ್ಥ್ ಮೆಲ್ಹೋತ್ರಾ ಅಭಿಮಾನಿ. ಇಂದು ಸಿದ್ಧಾರ್ಥ್ ರ 37ನೇ ವರ್ಷದ ಹುಟ್ಟುಹಬ್ಬವಿದ್ದು ನೆಚ್ಚಿನ ನಟನಿಗೆ ಸಾನ್ವಿ ಶುಭ ಹಾರೈಸಿದ್ದಾರೆ. ಸಾನ್ವಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಿದ್ಧಾರ್ಥ್ ಮೊಲ್ಹೋತ್ರಾ ಅವರ ಫೋಟೋ ಶೇರ್ ಮಾಡಿ ಹ್ಯಾಪಿ ಬರ್ತ್ಡೇ ಟು ಮೈ ಲವ್ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆಯೂ ಸಾನ್ವಿ ಹಲವು ಭಾರಿ ಸಿದ್ಧಾರ್ಥ್ ಮೊಲ್ಹೋತ್ರಾ ಅವರ ವಿಡಿಯೋ ಹಾಗೂ ಫೋಟೋಗಳನ್ನ ಶೇರ್ ಮಾಡಿದ್ದರು. ಇದೀಗ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಸಾನ್ವಿ ವಿಶ್ ಮಾಡಿದ್ದು ಸಿದ್ದಾರ್ಥ್ಗೆ ಬಾಲಿವುಡ್ನ ಸಾಕಷ್ಟು ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ.



