ಮನರಂಜನೆಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್

ತೆರೆಯ ಮೇಲೆ ಬಂದ ಸಂಚಾರಿ ವಿಜಯ್ ತಲೆದಂಡ!

ಖ್ಯಾತ ನಟ ಸಂಚಾರಿ ವಿಜಯ್ ನಿಧನದಿಂದ ಕನ್ನಡ ಚಿತ್ರರಂಗ ಬರಿದಾಗಿದೆ. ಉತ್ತಮ ನಟನನ್ನು ಕಳೆದುಕೊಂಡ ಸ್ಯಾಂಡಲ್ ವುಡ್ ಕಣ್ಣೀರು ಹಾಕ್ತಿದ್ದಾರೆ. ಈಗಾಗಲೇ ನಾನು ಅವನಲ್ಲ ಅವಳು, ಹರಿವು ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿಅದ್ಭುತವಾಗಿ ನಟಿಸಿದ್ದ ಸಂಚಾರಿ ವಿಜಯ್ ನಟನೆಯ ತಲೆದಂಡ ಸಿನಿಮಾ ಇಂದು ತೆರೆಗೆ ಬಂದಿದೆ.

ಮರಗಳನ್ನು ರಕ್ಷಿಸಬೇಕು, ಪರಿಸರ ಉಳಿಸಬೇಕು ಎಂಬ ಕಾಳಜಿ ಇಟ್ಟುಕೊಂಡು ಹೋರಾಡುವ ಬುದ್ಧಿಮಾಂದ್ಯನ ಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ. ಆದರೆ ಈ ಸಿನಿಮಾ ರಿಲೀಸ್ ಆಗುವ ಮುನ್ನವೇ ಸಂಚಾರಿ ವಿಜಯ್ ಇಹಲೋಕ ತ್ಯಜಿಸಿದ್ದು ದುರಾದೃಷ್ಟಕರ.

ಪ್ರವೀಣ್ ಕೃಪಾಕರ್ ನಿರ್ದೇಶನದ ತಲೆದಂಡ ಸಿನಿಮಾಗೆ ಹರಿಕಾವ್ಯ ಸಂಗೀತ ನೀಡಿದ್ದಾರೆ. ‘ಪ್ರಕೃತಿಯನ್ನು ಉಳಿಸಬೇಕೆಂಬ ತುಡಿತದ ಜೊತೆಗೆ ಸೋಲಿಗರ ಜನಾಂಗದ ಹಾಡುಗಳು ಮತ್ತು ಸಾಂಪ್ರದಾಯಿಕ ಹಬ್ಬಗಳು ತಲೆದಂಡ ಸಿನಿಮಾದಲ್ಲಿದೆ. ಚಿತ್ರಕ್ಕಾಗಿ ಸಾಕಷ್ಟು ಅಧ್ಯಯನ ನಡೆಸಿ ಪ್ರತಿ ಸನ್ನಿವೇಶಗಳಿಗೆ ಸಂಗೀತ ನೀಡಿದ್ದೇವೆ. ಜನಪದ ಗಾಯಕರನ್ನು ಸ್ಟುಡಿಯೋಗೆ ಕರೆಸಿ ಅವರಿಂದ ಹಾಡಿಸುವುದು ತುಂಬಾ ಕಷ್ಟಕರ ಕೆಲಸವಾಗಿತ್ತು. ಉತ್ತಮ ಔಟ್ ಪುಟ್ಗಾಗಿ ರೆಕಾರ್ಡಿಂಗ್ ವೇಳೆ ಸಾಕಷ್ಟು ಶ್ರಮಪಟ್ಟಿದ್ದಾಗಿ ಸಂಗೀತ ನಿರ್ದೇಶಕ ಹರಿಕಾವ್ಯ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button