Latestಮನರಂಜನೆರಾಜಕೀಯಸೆಲೆಬ್ರಿಟಿ

ಸುಮಲತಾ ರಾಜಕಾರಣಕ್ಕೆ ಬರಲು ಹೆಚ್​​ಡಿಕೆ ಮಾಡಿದ ಅಪಮಾನವೇ ಕಾರಣ: ಸತ್ಯ ಬಿಚ್ಚಿಟ್ಟ ನಟ ದೊಡ್ಡಣ್ಣ

ಬೆಂಗಳೂರು: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನನ್ನ ಮುಖದ ಮೇಲೆ ಪೇಪರ್ ಎಸೆದಿದ್ದು ನಿಜ. ಸುಮಲತಾ ಅಂಬರೀಷ್ ರಾಜಕಾರಣಕ್ಕೆ ಬರಲು ಕುಮಾರಸ್ವಾಮಿ ಮಾಡಿದ ಅಪಮಾನವೇ ಕಾರಣ ಎಂದು ಸ್ಯಾಂಡಲ್ ವುಡ್ ನ ಹಿರಿಯ ನಟ ದೊಡ್ಡಣ್ಣ ಹೇಳಿದ್ದಾರೆ.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಮಗೆ ಕಣ್ಣೀರು ಬರಲು ಗ್ಲಿಸರಿನ್ ಹಾಕಿಕೊಳ್ಳುತ್ತೇವೆ. ಅಂಬರೀಷ್ ಸ್ಮಾರಕ ವಿಚಾರ ಸಂಬಂಧ ಭೇಟಿಗೆ ಹೋದಾಗ ಕುಮಾರಸ್ವಾಮಿ ಅವಮಾನ ಮಾಡಿದ್ದು ನಿಜ. ಆಗ ನಟ ಎಸ್​. ಶಿವರಾಮ್ ಧೈರ್ಯ ಹೇಳಿದರು. ನಿಮ್ಮ ಕಣ್ಣಲ್ಲಿ ಯಾಕೆ‌ ಕಣ್ಣೀರು ಬರುತ್ತೆ. ಯಾರಿಗಾಗಿ ಕಣ್ಣೀರು ಹಾಕುತ್ತೀರಾ. ನಮಗಿಂತ ಚೆನ್ನಾಗಿ ನಿಮಗೆ ನಟನೆ ಬರುತ್ತೆ ಎಂದು ವ್ಯಂಗ್ಯವಾಡಿದರು.

ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಡಾ. ಅಂಬರೀಷ್ ನಡೆದಾಡುವ ದೇವರು. ಅಂಬರೀಷ್ ಬಗ್ಗೆ ಹಗುರವಾಗಿ ಮಾತನಾಡಿದರೆ ಸರಿ ಇರೋಲ್ಲ. ಅಂಬರೀಷ್ ಮೃತಪಟ್ಟಾಗ ಅಭಿಷೇಕ್ ಹಾಗೂ ಸುಮಲತಾ ಮೃತದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ಹೇಳಿದ ಬಳಿಕವೇ ನಿರ್ಧಾರ ಆಗಿದ್ದು. ಕುಮಾರಸ್ವಾಮಿ ಅವರೊಬ್ಬರೇನೂ ನಿರ್ಧಾರ ಮಾಡಿದ್ದಲ್ಲ‌. ಕನ್ನಡ ಚಿತ್ರರಂಗದಲ್ಲಿ ನೀವು ನಿರ್ಮಾಪಕರಾಗಿ ಕೆಲಸ ಮಾಡಿದ್ದೀರಾ. ಇನ್ನು ಮುಂದಾದರೂ ಮಾತನಾಡುವಾಗ ಎಚ್ಚರ ವಹಿಸಿ ಎಂದು ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದರು.

Spread the love

Related Articles

Leave a Reply

Your email address will not be published. Required fields are marked *

Back to top button