ಮನರಂಜನೆಸಿನಿಮಾ

ಸಿನಿಪ್ರಿಯರಿಗೆ ಕಮಾಲ್ ಮಾಡಲು ಬರ್ತಿದೆ ಬೈಟು ಲವ್

ದಾವಣಗೆರೆ: ಬೈಟು ಲವ್ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದ್ದು, ಫೆ. 18ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.ಬಜಾರ್ ಸಿನಿಮಾ ಖ್ಯಾತಿಯ ಧನ್ವೀರ್ ಹಾಗೂ ಕಿಸ್ ಬ್ಯೂಟಿ ಶ್ರೀಲೀಲಾ ನಟನೆಯ ಬೈಟು ಲವ್ ಸಿನಿಮಾದಲ್ಲಿ ನಟಿಸಿದ್ದು, ಹರಿಸಂತೋಷ್ ನಿರ್ದೇಶನ ಮಾಡಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ನಡಿ ನಿಶಾ ವೆಂಕಟ್ ಕೋಣಂಕಿ ಸಿನಿಮಾಕ್ಕೆ ನಿರ್ಮಾಣ ಮಾಡಿದ್ದು, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಲೀಲು – ಬಾಲು ಟ್ರ್ಯಾಕ್ ಹಿಟ್, ಬೈಟು ಲವ್ ಸಿನಿಮಾದ ಏನಾದ್ರೂ ಅಂದ್ಕೊಂಡ್ಲಿ ಏನಂತೆ ಹಾಡು ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸ್ತಿದೆ. ಧನ್ವೀರ್ ಹಾಗೂ ಶ್ರೀಲೀಲಾ ಅವರ ಮುದ್ದು ಮುದ್ದು ತುಂಟಾಟಗಳನ್ನೇ ಕೊರಿಯೋಗ್ರಫಿ ಮಾಡಲಾಗಿದೆ.

ಈ ಸಿನಿಮಾ ಸೆಟ್ಟೇರಿದಾಗಿಂದಲೂ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿತ್ತು. ಈಗಾಗಲೇ ಈ ಸಿನಿಮಾದ ಪೋಸ್ಟರ್ , ಟೀಸರ್ ಹಾಗೂ ಸಾಂಗ್ಸ್ ನಿಂದಲೇ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಬಜಾರ್ ಸಿನಿಮಾದಲ್ಲಿ‌ ಮಾಸ್ ಲುಕ್‌ನಲ್ಲಿ‌ ನಟಿಸಿದ್ದೆ. ಲವರ್ ಬಾಯ್ ಪಾತ್ರದಲ್ಲಿ ಬೈಟು ಲವ್ ಸಿನಿಮಾದಲ್ಲಿ ನಟಿಸಿದ್ದೇನೆ. ಈ ಪಾತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂಬ ವಿಶ್ವಾಸ ಇದೆ ಎಂದು ಧನ್ವೀರ್ ಹೇಳಿದರು.

ನಟಿ ಶ್ರೀಲೀಲಾ ಮಾತನಾಡಿ, ಮಲೆನಾಡು ಹುಡುಗಿ ಪಾತ್ರದಲ್ಲಿ ನಟಿಸಿದ್ದೇನೆ. ಬೈಟು ಲವ್ ಸಿನಿಮಾ ಕೇವಲ ಲವ್ ಮಾತ್ರ ಕಥೆ ಹೊಂದಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಇಷ್ಟವಾಗಲಿದೆ. ಈ ಸಿನಿಮಾ ಕಥೆ ಕೇಳಿದ್ದು ನನ್ನ ತಾಯಿ. ಅವರಿಗೆ ಇಷ್ಟವಾದ ಬಳಿಕ ನಾನು ನಟಿಸಿದೆ. ಕಥೆ ಕೇಳಿ ನಾನು ಥ್ರಿಲ್ ಆಗಿದ್ದೆ. ತುಂಬಾ ಗಂಭೀರ ಪಾತ್ರದಲ್ಲಿ ನಟಿಸಿದ್ದೇನೆ. ಕಾಮಿಡಿ, ಸೆಂಟಿಮೆಂಟ್, ಲವ್ ಸೇರಿದಂತೆ ಎಲ್ಲಾ ಅಂಶಗಳೂ ಈ ಸಿನಿಮಾದಲ್ಲಿವೆ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button