ಮನರಂಜನೆಸಿನಿಮಾಸೆಲೆಬ್ರಿಟಿ

ತಪ್ಪು ಮಾಡಿದವರು ತಿದ್ದಿಕೊಂಡಾಗ ಒಂದು ಅವಕಾಶ ಕೊಡಬೇಕು: ಎಸ್.ನಾರಾಯಣ್

ತಪ್ಪು ಮಾಡೋದು ಸಹಜ. ಆದರೆ ಆಗಿರುವ ತಪ್ಪನ ತಿದ್ದಿಕೊಂಡು ನಡೆಯಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯೇ ಅಂತಿಮವಲ್ಲ. ತಪ್ಪು ಆಗಿರುವುದು ತಿದ್ದಿಕೊಂಡಾಗ ಒಂದು ಅವಕಾಶ ಕೊಡಬೇಕು ಎಂದು ನಟ ಕಂ ನಿರ್ದೇಶಕ ಎಸ್ ನಾರಾಯಣ್ ಹೇಳಿದ್ದಾರೆ.

ಎಸ್.ನಾರಾಯಣ್ ಜೊತೆ ಅಶೋಕ್ ಸೇಠ್, ಫಾರೂಕ್ ಪಾಷಾ ಅನಂತ್ ಅಯ್ಯಸ್ವಾಮಿ, ರಾಜೇಂದ್ರ ಪ್ರಸಾದ್ ಸೇರಿ ಐವರು ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದರು. ಆ ಸಿನಿಮಾದಲ್ಲಿ ಹಿರಿಯ ನಟ ಅಭಿಜಿತ್ ಕೂಡ ನಟಿಸಿದ್ದು ಎಸ್.ನಾರಾಯಣ್ ಅವರಿಗೆ ಉಳಿದ ನಿರ್ಮಾಪಕರನ್ನು ಪರಿಚಯಿಸಿದ್ದರು. ಹಣದ ಸಮಸ್ಯೆಯಿಂದಾಗಿ ಸಿನಿಮಾ ನಿಂತಿದ್ದು ಹೀಗಾಗಿ ಎಸ್ ನಾರಾಯಣ್ ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಸೈಟ್ ಮೇಲೆ ಫಾರೂಕ್ ಗೆ ಸಾಲ ಕೊಡಿಸಿದ್ದರು.

ಎಸ್.ನಾರಾಯಣ್ ಅವರ ಮಗನ ಹೆಸರಿನಲ್ಲಿ 1ಕೋಟಿ 56 ಲಕ್ಷ ಲೋನ್ ಗೆ ದಾಖಲೆ ನೀಡಿ ಬಂದ ಹಣವನ್ನು ಸಿನಿಮಾಗೆ ಹಾಕಿದ್ದಾರೆ. ಆದರೆ ಈ ಮಧ್ಯೆ ನಾರಾಯಣ್​ ಅವರಿಗೆ ಗೊತ್ತಿಲ್ಲದೆ ಫಾರೂಕ್ ಎರಡು ಕೋಟಿ ಐದು ಲಕ್ಷ ಲೋನ್ ಮಂಜೂರು ಮಾಡಿಸಿಕೊಂಡು ವಂಚನೆ ಮಾಡಿದ್ದನು.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಎಸ್ ನಾರಾಯಣ್ ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದು ಓಡಾಟ ಆರಂಭಿಸಿದರು. ಮೋಸ ಮಾಡಿದವರ ಜೊತೆ ಕೂತು ಮಾತನಾಡುವಾಗ ಮೋಸ ಮಾಡಿದ ಹಣ ಕೊಡಲು ಒಪ್ಪಿದ್ದಾರೆ. ಈಗಾಗಲೇ ಶೇ 25 ಲಕ್ಷ ರೂಪಾಯಿ ಹಣವನ್ನು ಕೊಟ್ಟಿದ್ದಾರೆ. ಉಳಿದ ಹಣ ಕೊಡುತ್ತಿದ್ದಾರೆ. ಅವರೆಲ್ಲರು ನಿರಂತರ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆನೇ ಅಂತ್ಯವಲ್ಲ. ತಪ್ಪು ಆಗಿರುವುದನ್ನು ತಿದ್ದಿಕೊಂಡಾಗ ಅವರಿಗೆ ಒಂದು ಅವಕಾಶ ಕೊಡಬೇಕು ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button