ಮನರಂಜನೆಸಿನಿಮಾಸೆಲೆಬ್ರಿಟಿ

ರಿಚರ್ಡ್ ಆಂಟನಿಯಾದ ರಕ್ಷಿತ್ ಶೆಟ್ಟಿ!

ಪೂರ್ಣ ವಿ-ರಾಮ

ಕೆಜಿಎಫ್ ಹಾಗೂ ರಾಜಕುಮಾರ ಖ್ಯಾತಿಯ ಹೊಂಬಾಳೆ ಫಿಲಂಸ್ ಹಾಗೂ ರಕ್ಷಿತ್ ಶೆಟ್ಟಿ ಸೇರಿ ಸಿನೆಮಾ ಮಾಡ್ತಾರೆ ಎಂಬ ಸುದ್ದಿ ಒಂದು ವಾರದಿಂದ ಓಹೋ ಎನ್ನುವ ರೀತಿಯಲ್ಲಿ ಓಡಾಡುತ್ತಿತ್ತು. ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನೆಮಾಗಳಿಗೆ ಹೆಸರಾಗಿರುವ ಹೊಂಬಾಳೆ ಫಿಲಂಸ್ ವತಿಯಿಂದ ಇನ್ನೊಂದು ಭರ್ಜರಿ ಗಿಫ್ಟ್ ಸಿಗಲಿದೆ ಎಂದುಕೊಂಡಿದ್ದವರಿಗೆ ಇದೀಗ ಉತ್ತರ ಸಿಕ್ಕಿದೆ. ರಿಚರ್ಡ್ ಆಂಟನಿ ಎಂಬ ಟೈಟಲ್ ಅನೌನ್ಸ್ ಮಾಡಿರುವ ಹೊಂಬಾಳೆ ಸಂಸ್ಥೆ, ಈ ಚಿತ್ರವನ್ನು ರಕ್ಷಿತ್ ಶೆಟ್ಟಿಯವರೇ ನಟಿಸಿ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಿಕೊಂಡಿದೆ. ಜೊತೆಗೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಲಿದೆ ಎನ್ನುವ ಸೂಚನೆಯನ್ನ ಕೂಡ ಟೈಟಲ್ ಪೋಸ್ಟರ್ ನಲ್ಲಿ ಕೊಟ್ಟುಬಿಟ್ಟಿದೆ!

ನಾರಾಯಣ ಈಗ ಆಂಟನಿ!

ಉಳಿದವರು ಕಂಡಂತೆ, ಅವನೇ ಶ್ರೀಮನ್ನಾರಾಯಣ ಥರದ ಡಿಫರೆಂಟ್ ಕಾನ್ಸೆಪ್ಟ್ ಮೂಲಕ ಜನರ ಮನ ಗೆದ್ದಿರುವ ರಕ್ಷಿತ್ ಈ ಬಾರಿ ಥ್ರಿಲ್ಲರ್ ಸಬ್ಜೆಕ್ಟ್ ಕೈಗೆತ್ತಿಕೊಂಡಿರುವುದು ಅವರ ಮಂಗಳೂರು ಹಾಗೂ ಬೆಂಗಳೂರು ಮತ್ತಿತರ ಊರಿನ ಅಭಿಮಾನಿಗಳಿಗೆ ಹೆವೀ ಸಂಭ್ರಮ ನೀಡಿದೆ. ಸಿಕ್ಕಾಪಟ್ಟೆ ಸಂತಸ ತಂದಿದೆ!

ಕೆಲ ದಿನಗಳಿಂದ ಕೊಂಚ ಅಪ್ ಸೆಟ್ ಆಗಿದ್ದ ರಕ್ಷಿತ್, ಖಾಸಗಿ ವಾಹಿನಿಯೊಂದರ ಮೇಲೆ ತಿರುಗಿಬಿದ್ದಿದ್ದರು. ತನ್ನ ತೇಜೋವಧೆ ಮಾಡಿರುವ ವಾಹಿನಿಗೆ ಅತೀ ಶೀಘ್ರದಲ್ಲೇ ಉತ್ತರ ಕೊಡುತ್ತೇನೆ ಎಂದಿದ್ದರು. ಆ ಉತ್ತರ ಸಿಗುವ ಮುನ್ನವೇ ಇದೀಗ ರಿಚರ್ಡ್ ಆಂತೊನಿ ಎಂಬ ಉತ್ತರೋತ್ತರ ನಿರೀಕ್ಷೆ ಮೂಡಿಸುವ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ!

Spread the love

Related Articles

Leave a Reply

Your email address will not be published. Required fields are marked *

Back to top button