ಮನರಂಜನೆಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್

2 ಕೋಟಿ ಆಫರ್ ತಿರಸ್ಕರಿಸಿದ್ದಕ್ಕೆ ಸಾಯಿ ಪಲ್ಲವಿಯನ್ನ ಹೊಗಳಿದ ನಿರ್ದೇಶಕ

ನಟಿ ಸಾಯಿ ಪಲ್ಲವಿ ಕುರಿತಾಗಿ ಸಿನಿಪ್ರಿಯರಿಗೆ ಹೊಸದಾಗಿ ಹೇಳೋ ಅಗತ್ಯವೇ ಇಲ್ಲ. ಯಾಕೆಂದರೇ ಇಡೀ ದಕ್ಷಿಣ ಭಾರತದಲ್ಲಿ ಸಾಯಿ ಪಲ್ಲವಿ ಅಷ್ಟರ ಮಟ್ಟಿಗೆ ಖ್ಯಾತಿ ಘಳಿಸಿದ್ದಾರೆ. ಇದುವರೆಗೂ ಬೆರಳೆಣಿಕೆಯಷ್ಟು ಸಿನಿಮಾದಲ್ಲಿ ನಟಿಸಿದ್ದರು ಅವೆಲ್ಲವೆ ಯಶಸ್ಸು ಘಳಿಸಿದ್ದು, ಹಲವು ಪ್ರಶಸ್ತಿಗಳು ಸಾಯಿ ಪಲ್ಲವಿ ಮುಡಿಗೇರಿದೆ. ಇದೀಗ ನಟಿ ಸಾಯಿ ಪಲ್ಲವಿ ತೆಗೆದುಕೊಂಡ ನಿರ್ಧಾರವೊಂದನ್ನ ಖ್ಯಾತ ನಿರ್ದೇಶಕರೊಬ್ಬರು ಹಾಡಿ ಹೊಗಳಿದ್ದಾರೆ.

ಇತ್ತೀಚೆಗೆ ಕಿಶೋರ್ ತಿರುಮಲ ನಿರ್ದೇಶನದ ರಶ್ಮಿಕಾ ಮಂದಣ್ಣ ಹಾಗೂ ಶರ್ವಾನಂದ್ ನಟನೆಯ ಅಡವಾಳ್ಳು ಮೀಕು ಜೋಹರ್ಲು ಸಿನಿಮಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್, ನಟಿ ಸಾಯಿ ಪಲ್ಲವಿ ಸೇರಿದಂತೆ ಸಾಕಷ್ಟು ಮಂದಿ ಹಾಜರಿದ್ದರು.

ಈ ವೇಳೆ ನಿರ್ದೇಶಕ ಸುಕುಮಾರ್ ನಟಿ ಸಾಯಿ ಪಲ್ಲವಿಯನ್ನ ಹಾಡಿ ಹೊಗಳಿದ್ದಾರೆ. ಈ ಹಿಂದೆ ನಟಿ ಸಾಯಿ ಪಲ್ಲವಿ ಫೇರ್​ನೆಸ್ ಕ್ರೀಮ್​ ಜಾಹೀರಾತಿನಲ್ಲಿ ನಟಿಸಲು ತಿರಸ್ಕರಿಸಿದ್ದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಫೇರ್​ನೆಸ್ ಕ್ರೀಮ್ ನೀಡುವ ಭರವಸೆ ನಕಲಿ ಎಂದು ಸಾಯಿ ಪಲ್ಲವಿ ಆ ಜಾಹೀರಾತನ್ನು ಕೈ ಬಿಟ್ಟಿದ್ದರು. ಇದನ್ನು ನೆನೆದ ಸುಕುಮಾರ್ ಅಷ್ಟೊಂದು ದುಬಾರಿ ಜಾಹೀರಾತನ್ನು ಸಾಯಿ ಪಲ್ಲವಿ ತಿರಸ್ಕರಿಸಿದ ವಿಚಾರ ಕೇಳಿ ಅಚ್ಚರಿ ಆಯಿತು. ಆದರೆ ಅದರ ಹಿಂದಿನ ಉದ್ದೇಶ ಕೇಳಿ ಒಳ್ಳೆಯದು ಅನಿಸಿತು ಎಂದು ನಿರ್ದೇಶಕ ಸುಕುಮಾರ್ ಹೇಳಿದ್ದಾರೆ. ಅಂದದ್ಹಾಗೆ ಈ ಜಾಹೀರಾತಿನಲ್ಲಿ ನಟಿಸಿಲು ಸಾಯಿ ಪಲ್ಲವಿಗೆ 2 ಕೋಟಿ ಆಫರ್ ನೀಡಲಾಗಿತ್ತಂತೆ.

ಸಿಕ್ಕ ಸಿಕ್ಕ ಸಿನಿಮಾಗಳನ್ನ ಸಾಯಿ ಪಲ್ಲವಿ ಒಪ್ಪಿಕೊಳ್ಳುವುದಿಲ್ಲ. ಯಾಕೆಂದರೆ ಸಿನಿಮಾ ಮತ್ತು ಕಥೆಯ ಆಯ್ಕೆಯಲ್ಲಿ ತುಂಬಾನೇ ಚ್ಯೂಸಿಯಾಗಿರುವ ಸಾಯಿ ಪಲ್ಲವಿ ಕಥೆ ತುಂಬಾ ಇಷ್ಟ ಆದರೆ ಮಾತ್ರವೇ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಇತ್ತೀಚೆಗೆ ರಿಲೀಸ್ ಆದ ‘ಶ್ಯಾಮ ಸಿಂಗ ರಾಯ್’ ಸಿನಿಮಾ ಸಖತ್ ಸದ್ದು ಮಾಡಿದ್ದು ಇದೀಗ ಮತ್ತೊಂದು ಸಿನಿಮಾ ‘ವಿರಾಟ ಪರ್ವಂ’ ರಿಲೀಸ್‌ಗೆ ರೆಡಿಯಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button