
ಪೂರ್ಣ ವಿ-ರಾಮ
ಎಂಆರ್! ಇದು ವರ್ಷದ ಹಿಂದೆ ರವಿ ಶ್ರೀವತ್ಸ ಶುರು ಮಾಡಿದ ಸಿನೆಮಾ. ಮುತ್ತಪ್ಪ ರೈ ಎಂಬ ಭೂಗತ ಹುತ್ತದ ಸುತ್ತ ಹೆಣೆಯಲಾದ ಕಥೆ ಎಂದು ಅನೌನ್ಸ್ ಮಾಡಿದ್ದಷ್ಟೇ ಅಲ್ಲ, ದೊಡ್ಡ ಮಟ್ಟದಲ್ಲಿ ಆ ಚಿತ್ರದ ಮುಹೂರ್ತವನ್ನ ಮಾಡಿಬಿಟ್ಟರು. ಇನ್ನೇನು ಸಿನೆಮಾ ಶುರುವಾಗಬೇಕು ಎನ್ನುವಷ್ಟರಲ್ಲಿ ಮುತ್ತಪ್ಪ ರೈ ಮನೆಮಂದಿಯ ಪರ್ಮಿಷನ್ ಇಲ್ಲದೇ ಅದು ಹೇಗೆ ಸಿನೆಮಾ ಮಾಡ್ತಾರೆ ಅಂತ ರೈ ಆಪ್ತ ಪದ್ಮನಾಭ ಗೌಡ ಕ್ಯಾತೆ ತೆಗೆದು ಪ್ರೆಸ್ ಮೀಟ್ ಮಾಡಿದರು. ಎಂ ಆರ್ ಹೆಸರನ್ನು ಈ ಕೂಡಲೇ ಬದಲಾಯಿಸಬೇಕು ಅಂತ ಮೀಡಿಯಾ ಎದುರು ಅನೌನ್ಸ್ ಮಾಡಿಬಿಟ್ಟರು.
ಡೆಡ್ಲಿ ಸೋಮನ ಮೂರನೇ ಅವತಾರಕ್ಕೆ ಮುಂದಾದ್ರು ರವಿ!
ರವಿ ಶ್ರೀವತ್ಸ ಆ ಪ್ರಾಜೆಕ್ಟ್ ಗೆ ಎಂಆರ್ ಹೆಸರನ್ನು ಅಳಿಸಿ ಆ ಜಾಗದಲ್ಲಿ ಡಿಆರ್ ಎಂದು ಬದಲಾಯಿಸಿದರು. ಡಿ ಆರ್ ಇನ್ನೇನು ಶುರುವಾಗಬೇಕು ಎನ್ನುವಷ್ಟರಲ್ಲಿ ಮತ್ತದೇ ಮುತ್ತಪ್ಪ ರೈ ಕಡೆಯವರು ಇದು ರೈ ಅವರ ಕಥೆ ಆಧಾರಿತ ಚಿತ್ರವಲ್ಲ ಎಂದು ರೈಟಿಂಗ್ ನಲ್ಲಿ ಕೊಡಬೇಕು. ನಂತರ ಸಿನೆಮಾ ಶುರುಮಾಡಬೇಕು. ಡಿಆರ್ಗೂ ಎಂಆರ್(ಮುತ್ತಪ್ಪ ರೈ) ಗೂ ಸಂಬಂಧ ಇಲ್ಲ ಎಂದು ಶರಾ ಬರಕೊಡಬೇಕು ಎಂದರು.
ಹೀರೋ ದೀಕ್ಷಿತ್ ಹುಟ್ಟುಹಬ್ಬದಂದು ಹೊಸ ಉಡುಗೆ-ಕೊಡುಗೆ!
-ಇಷ್ಟೆಲ್ಲಾ ಬೆಳವಣಿಗೆ ಆಗುತ್ತಿದ್ದಂತೇ ರವಿ ಶ್ರೀವತ್ಸ ಕೊಂಚ ರೋಸಿ ಹೋದರು. ಡೆಡ್ಲಿ ಸೋಮ ಸಿನೆಮಾ ಥರದ ರಿಯಲಿಸ್ಟಿಕ್ ಸಿನೆಮಾ ಮಾಡಿರೋ ಶ್ರೀವತ್ಸ ಕೊನೆಗೊಂದು ದಿನ ಡಿಸೈಡ್ ಮಾಡಿ, ರೈ ಕಥಾನಕಕ್ಕೆ ಗುಡ್ ಬೈ ಹೇಳಲು ಡಿಸೈಡ್ ಮಾಡಿಬಿಟ್ಟರು. ಜೊತೆಗೆ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ಹಾಗೂ ಕೀರ್ತಿ ತಂದುಕೊಟ್ಟ ಡೆಡ್ಲಿ ಸೋಮ ಚಿತ್ರದ ಮುಂದುವರಿದ ಭಾಗವಾದ ಡೆಡ್ಲಿ 3 ಸಿನೆಮಾವನ್ನ ಇದೀಗ ಕೈಗೆತ್ತಿಕೊಂಡಿದ್ದಾರೆ. ಅದಕ್ಕೆ ಡಿ3 ಎಂದು ಹೆಸರಿಟ್ಟಿದ್ದಾರೆ. ಅತೀ ಶೀಘ್ರದಲ್ಲೇ ಅಂದರೆ ಚಿತ್ರದ ನಾಯಕ ದೀಕ್ಷಿತ್ ಬರ್ತ್ ಡೇ ದಿನ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ!
ಎನಿವೇಸ್, ಡೆಡ್ಲಿ ಸೋಮನ ಮುಂದುವರಿದ ಮೂರನೇ ಭಾಗ ಹೇಗಿರುತ್ತದೆ ಕಾದುನೋಡಬೇಕಿದೆ. ಕ್ರಿಯಾಶೀಲ ನಿರ್ದೇಶಕ ರವಿ ಶ್ರೀವತ್ಸ ಈ ಬಾರಿ ಏನೆಲ್ಲಾ ಕಮಾಲು ಮಾಡಲಿದ್ದಾರೆ ನೋಡೋಣ…
ಆಲ್ ದಿ ಬೆಸ್ಟ್ ರವೀ…!




