Latestಮನರಂಜನೆಸಿನಿಮಾಸೆಲೆಬ್ರಿಟಿ

ತಂದೆಯ ಅಂತಿಮ ಸಂಸ್ಕಾರ ನಡೆಸಿದ ರವೀನಾ ಟಂಡನ್

ಟಾಲಿವುಡ್ ನಟಿ ರವೀನಾ ಟಂಡನ್ ತಂದೆ ಜನಪ್ರಿಯ ಸಿನಿಮಾ ನಿರ್ದೇಶಕ ರವಿ ಟಂಡನ್ ನಿಧನರಾಗಿದ್ದಾರೆ. ತಂದೆ ನಿಧನದ ಸುದ್ದಿಯನ್ನ ರವೀನಾ ಟಂಡನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ತಂದೆಯ ಜೊತೆಗಿನ ಕೆಲವು ಫೋಟೋಗಳನ್ನ ಶೇರ್ ಮಾಡಿದ್ದಾರೆ.

“ನೀವು ಸದಾ ನನ್ನೊಂದಿಗೆ ನಡೆಯುತ್ತಿರುತ್ತೀರಿ. ನಾನು ಸದಾ ನಿಮ್ಮವಳಾಗಿರುತ್ತೇನೆ. ನಾನು ನಿಮ್ಮನ್ನು ಹೋಗಲು ಬಿಡುವುದಿಲ್ಲ. ಲವ್ ಯು ಅಪ್ಪ” ಎಂದು ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಅಂತಿಮ ವಿಧಿ ವಿಧಾನದ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರವಿ ಟಂಡನ್ ಖೇಲ್ ಖೇಲ್ ಮೆ, ನಜರಾನಾ, ಅನ್ಹೋನೆ, ಜಿಂದಗಿ, ಮಜ್ಬೂರ್, ಖುದ್ದಾರ್ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. ಜೊತೆಗೆ ಏಕ್ ಮೇ ಔರ್ ಏಕ್ ತು, ಅಪ್ನೆ ರಂಗ್ ಹಜಾರ್, ಅನ್ಹೋನೆ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನ ನಿರ್ಮಾಣ ಮಾಡಿದ್ದಾರೆ.

ರವಿನಾ ಸೋಷಿಯಲ್ ಮೀಡಿಯಾ ಪೋಸ್ಟ್​ಗೆ ನಟಿಯರಾದ ನಮ್ರತಾ ಶಿರೋಡ್ಕರ್, ನೀಲಂ ಕೊರಾಠಿ, ಜೂಹಿ ಚಾವ್ಲಾ ಸೇರಿದಂತೆ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button