ಮುಂಬೈನಲ್ಲಿ ಅದ್ದೂರಿ ಮನೆ ಖರೀದಿಸಿದ ರಶ್ಮಿಕಾ ಮಂದಣ್ಣ?

ಚಿತ್ರರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ರಶ್ಮಿಕಾ ನಟಿಸಿದ ಪ್ರತಿಯೊಂದು ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದು ಸಾಕಷ್ಟು ಆಫರ್ಗಳು ರಶ್ಮಿಕಾರನ್ನ ಅರಸಿಕೊಂಡು ಬರ್ತಿವೆ. ಸ್ಟಾರ್ ನಟಿಯರನ್ನೇ ಹಿಂದಿಕ್ಕಿ ರಶ್ಮಿಕಾ ನಂಬರ್ ವನ್ ಪಟ್ಟಕ್ಕೆ ಹೆಜ್ಜೆ ಇಡ್ತಿದ್ದಾರೆ. ಇದ್ರ ಮಧ್ಯೆ ರಶ್ಮಿಕಾ ಹೊಸ ಮನೆ ಖರೀದಿಸಿದ್ದಾರಾ ಅನ್ನೋ ಪ್ರಶ್ನೆ ಹುಟ್ಟುಕೊಂಡಿದೆ.
ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ರಶ್ಮಿಕಾ ಮಂದಣ್ಣಗೆ ಮತ್ತಷ್ಟು ಖ್ಯಾತಿ ಸಿಕ್ಕಿದೆ. ಬಾಲಿವುಡ್ನಿಂದ ಸಾಕಷ್ಟು ಆಫರ್ಗಳು ಬರ್ತಿದ್ದು ಸ್ಟಾರ್ ನಟರ ಸಿನಿಮಾಗಳಿಗೆ ರಶ್ಮಿಕಾರೇ ನಾಯಕಿಯಾಗಿ ಬೇಕು ಅನ್ನೋ ಅಷ್ಟರ ಮಟ್ಟಿಗೆ ಈಕೆ ಖ್ಯಾತಿ ಘಳಿಸಿದ್ದಾಳೆ. ಇದೀಗ ರಶ್ಮಿಕಾ ಶೇರ್ ಮಾಡಿರುವ ವಿಡಿಯೋವೊಂದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ರಶ್ಮಿಕಾ ಪರಭಾಷೆಯಲ್ಲಿ ಸಾಕಷ್ಟು ಅಫರ್ ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ತಮ್ಮ ಸಿನಿಮಾಗಳ ಓಡಾಟಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಈಗಾಗ್ಲೆ ಹೈದರಾಬಾದ್ನಲ್ಲಿ ಮನೆ ಖರೀದಿಸಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಮನೆ ಶಿಫ್ಟ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದು ರಶ್ಮಿಕಾ ಮತ್ತೊಂದು ಹೊಸ ಮನೆ ಖರೀದಿಸಿರ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.
ಕಳೆದ ಫೆಬ್ರವರಿ 2021ರಲ್ಲಿ ರಶ್ಮಿಕಾ ಮುಂಬೈನಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ. ಈಗಾಗ್ಲೆ ರಶ್ಮಿಕಾ ಮಿಷನ್ ಮಜ್ನು ಹಾಗೂ ಗುಡ್ ಬಾಯ್ ಚಿತ್ರದಲ್ಲಿ ನಟಿಸುತ್ತಿದ್ದು ಬಾಲಿವುಡ್ನ ಇನ್ನಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಹೋಟೆಲ್ನಲ್ಲಿ ಉಳಿದುಕೊಳ್ಳುವ ಬದಲು ಹೊಸ ಮನೆಗೆ ಖರೀದಿಸಿದ್ದಾರೆ ಎನ್ನಲಾಗ್ತಿದೆ.
ರಶ್ಮಿಕಾ ಮನೆಯನ್ನ ಶಿಫ್ಟ್ ಮಾಡುತ್ತಿರುವ ವಿಡಿಯೋವನ್ನ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ಕೆಲಸವನ್ನ ಬದಲಾಯಿಸುವುದು ಸುಲಭವಲ್ಲ, ಆದರೆ ನಾನು ನನ್ನ ಸ್ವಂತ ಕೆಲಸವನ್ನು ಮಾಡಲು ಇಷ್ಟಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ.



