ಬಾಲಿವುಡ್ಮನರಂಜನೆ

ರಣಬೀರ್ ಪತ್ನಿಯಾದ ನಟಿ ರಶ್ಮಿಕಾ ಮಂದಣ್ಣ

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ. ತೆಲುಗಿನ ಅರ್ಜುನ್ ರೆಡ್ಡಿ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರ ಹೊಸ ಪ್ಯಾನ್ ಇಂಡಿಯಾ ಸಿನಿಮಾಗೆ ರಶ್ಮಿಕಾ ಮಂದಣ್ಣರನ್ನ ಚಿತ್ರತಂಡ ಆಯ್ಕೆ ಮಾಡಿದೆ.

ಸಂದೀಪ್ ರೆಡ್ಡಿ ನಿರ್ದೇಶನದ ಅನಿಮಲ್ ಚಿತ್ರದಲ್ಲಿ ನಾಯಕನಾಗಿ ನಟ ರಣಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ರಣಬೀರ್ ಜೊತೆ ಡ್ಯೂಯೆಟ್ ಹಾಡಲು ನಟಿ ಪರಿಣಿತಿ ಚೋಪ್ರಾರನ್ನ ಚಿತ್ರತಂಡ ಆಯ್ಕೆ ಮಾಡಿತ್ತು. ಆದರೆ ಸದ್ಯ ಪರಿಣಿತಿ ಚಿತ್ರತಂಡದಿಂದ ಹೊರ ನಡೆದಿದ್ದು, ಆ ಜಾಗಕ್ಕೆ ರಶ್ಮಿಕಾರನ್ನ ಕರೆತರಲು ಚಿತ್ರತಂಡ ಮುಂದಾಗಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಮಾತ್ರ ಹೊರ ಬರಬೇಕಿದೆ.

ಅನಿಮಲ್ ಚಿತ್ರವನ್ನ ನಿರ್ದೇಶಕ ಸಂದೀಪ್ ರೆಡ್ಡಿ ಸಾಕಷ್ಟು ಸಮಯದ ಹಿಂದಿಯೇ ಅನೌನ್ಸ್ ಮಾಡಿದ್ರು. ಆದ್ರೆ ಕೋವಿಡ್ ಹಾಗೂ ನಾಯಕಿಯ ಬದಲಾವಣೆಯ ಕಾರಣದಿಂದ ಚಿತ್ರ ಟೇಕಾಫ್ ಆಗಿರಲಿಲ್ಲ. ಇದೀಗ ಕೋವಿಡ್ ಕಡಿಮೆಯಾಗಿದ್ದು ನಾಯಕಿಯು ಫೈನಲ್ ಆಗಿದ್ದಾರೆ. ಹೀಗಾಗಿ ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ.
ಅರ್ಜುನ್ ರೆಡ್ಡಿ ಸಿನಿಮಾದಿಂದ ವಿಭಿನ್ನ ಕಥೆ ಅನಿಮಲ್ ಸಿನಿಮಾದಲ್ಲಿ ಇರಲಿದ್ದು, ಚಿತ್ರಕ್ಕೆ ಭೂಷಣ್ ಕುಮಾರ್ ಬಂಡವಾಳ ಹೂಡ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button