
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಎರಡೂವರೆ ತಿಂಗಳುಗಳು ಕಳೆದಿದ್ದರು ಅವರ ನೆನಪು ಮಾತ್ರ ಮರೆಯಾಗಿಲ್ಲ. ಇಂದಿಗೂ ಪುನೀತ್ ಅವರನ್ನು ನೆನಪು ಮಾಡಿಕೊಳ್ಳುವ ಕೆಲಸಗಳು ನಡೆಯುತ್ತಲೇ ಇದೆ. ಇದೀಗ ಪುನೀತ್ ನಟನೆಯ ಜೇಮ್ಸ್ ಸಿನಿಮಾದ ಮೇಲೆ ಎಲ್ಲರ ಗಮನ ಹೆಚ್ಚಿದ್ದು ಜೇಮ್ಸ್ ಸಿನಿಮಾದ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಯೊಂದನ್ನ ನಿರ್ದೇಶಕ ಚೇತನ್ ಬಿಚ್ಚಿಟ್ಟಿದ್ದಾರೆ.
ಪುನೀತ್ ರಾಜ್ಕುಮಾರ್ ನಿಧನರಾಗುವ ಕೆಲವೇ ದಿನಗಳ ಮುನ್ನ ಜೇಮ್ಸ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದ್ದರು. ಆದರೆ ಡಬ್ಬಿಂಗ್ ಮಾತ್ರ ಆರಂಭವಾಗಿರಲಿಲ್ಲ. ಇದೀಗ ಈ ಬಗ್ಗೆ ಮಾತನಾಡಿದ ನಿರ್ದೇಶಕ ಚೇತನ್ ಜೇಮ್ಸ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ರೆಕಾರ್ಡ್ ಆಗಿರುವ ಪುನೀತ್ ಅವರ ಧ್ವನಿಯನ್ನ ಉಳಿಸಿಕೊಳ್ಳಬೇಕು ಎಂದು ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ.
ಸುತ್ತ ಮುತ್ತಲಿನ ಶಬ್ದಗಳನ್ನು ಆದಷ್ಟು ಡಿಲೀಸ್ ಮಾಡಿ ಅವರ ಧ್ವನಿ ಮಾತ್ರ ಉಳಿಸಿಕೊಳ್ಳಲು ನೋಡುತ್ತಿದ್ದೇವೆ. ಒಂದು ವೇಳೆ ಸರಿಯಾಗದೆ ಹೋದರೆ ಶಿವಣ್ಣ ಡಬ್ಬಿಂಗ್ ಮಾಡಿಕೊಡೊದಾಗಿ ಹೇಳಿದ್ದಾರೆ. ಇವೆಲ್ಲ ಗೊತ್ತಾಗಲು ಇನ್ನೂ ಹದಿನೈದು ದಿನ ಬೇಕು ಎಂದು ನಿರ್ದೇಶಕ ಚೇತನ್ ಹೇಳಿದ್ದಾರೆ.

ಅಪ್ಪು ಸಾರ್ ನೆನಪುಗಳನ್ನ ಮರೆಯೋಕೆ ಸಾಧ್ಯವೇ ಇಲ್ಲ. ಪ್ರತಿದಿನ ಜೇಮ್ಸ್ ಸಿನಿಮಾದ ಪುಟೇಜ್ಗಳನ್ನ ನೋಡುವಾಗ ನನ್ನ ಕಣ್ಣಲಿ ನೀರು ಬರುತ್ತದೆ. ಎಷ್ಟೇ ಕಂಟ್ರೋಲ್ ಮಾಡಿದರು ಅವರನ್ನ ತೆರೆಯ ಮೇಲೆ ನೋಡಿದ ತಕ್ಷಣ ಭಾವುಕನಾಗುತ್ತೇನೆ. ಅವರಿಗೆ ಅಂತಹ ಶಕ್ತಿ ಇದೆ ಎಂದಿದ್ದಾರೆ.
ಜೇಮ್ಸ್ ಸಿನಿಮಾದ ಹೊಸ ಪೋಸ್ಟರನ್ನು ಜನವರಿ 26ರಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಮಾರ್ಚ್ 17ಕ್ಕೆ ಪುನೀತ್ ಹುಟ್ಟುಹಬ್ಬವಿದ್ದು ಅಂದು ಜೇಮ್ಸ್ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.



