ಮನರಂಜನೆಸಿನಿಮಾಸ್ಯಾಂಡಲ್ ವುಡ್
ಓಟಿಟಿಗೆ ಬರಲು ತಯಾರಾದ ಪುನೀತ್ ನಟನೆಯ ಜೇಮ್ಸ್!

ಕಳೆದ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ಓಟಿಟಿಗೆ ಬರಲು ಸಿದ್ದವಾಗಿದೆ. ಇದೇ ಏಪ್ರಿಲ್ 14ರಂದು ಸೋನಿಲಿವ್ ವೇದಿಕೆಯಲ್ಲಿ ಜೇಮ್ಸ್ ಬಿಡುಗಡೆ ಆಗಲಿದೆ.
ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಸಿನಿಮಾ ಬಿಡುಗಡೆಯಾದ ನಾಲ್ಕೇ ನಾಲ್ಕು ದಿನಕ್ಕೆ 100 ಕೋಟಿ ಕಲೆಕ್ಷನ್ ಮಾಡಿತ್ತು. ಸಿನಿಮಾ ಬಿಡುಗಡೆಗೂ ಮೊದಲೇ ಡಿಜಿಟಲ್ ಹಕ್ಕನ್ನು 40 ಕೋಟಿಗೆ ಸೋನಿಲಿವ್ ಪಡೆದಿತ್ತು. ಸೋನಿಲಿವ್ ನಲ್ಲಿ ಜೇಮ್ಸ್ ಸಿನಿಮಾ ಕನ್ನಡದ ಜೊತೆಗೆ ತೆಲುಗು, ತಮಿಳು,ಮಲಯಾಳಂ ಹಾಗೂ ಹಿಂದಿಯಲ್ಲೂ ಪ್ರಸಾರವಾಗಲಿದೆ.
ಜೇಮ್ಸ್ ಸಿನಿಮಾ ಕರ್ನಾಟಕದಲ್ಲೇ 389 ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಸೇರಿದಂತೆ ವಿಶ್ವಾದ್ಯಂತ ಒಟ್ಟು 4 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಪ್ರದರ್ಶನಗೊಂಡಿತ್ತು.




