
ಬಾಲಿವುಡ್ ನಟ ನಾಲ್ ಕಪೂರ್ ಮತ್ತು ನೈನಾ ಬಚ್ಚನ್ ಅವರು ಮದುವೆಯಾಗಿ ಆರು ವರ್ಷದ ಬಳಿಕ ಮನೆಗೆ ಗಂಡು ಮಗು ಆಗಮಿಸಿದೆ. ಈ ವಿಚಾರವನ್ನು ಕುನಾಲ್ ಕಪೂರ್ ಸೋಶಿಯಲ್ ಮೀಡಿಯಾದ ತಮ್ಮ ಖಾತೆಯಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಟೌನ್ ಗಣ್ಯರು ಅವರಿಗೆ ಶುಭ ಕೋರಿದ್ದಾರೆ.
ನೈನಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ, ನಾವಿಬ್ಬರು ತಂದೆ-ತಾಯಿಯಾಗಿದ್ದೇವೆ ಅಂತ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಪ್ರೀತಿ ತೋರಿದ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಮತ್ತು ದೇವರಿಗೆ ಕುನಾಲ್ ಧನ್ಯವಾದ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಿಷಯ ಹಂಚಿಕೊಳ್ಳುತ್ತಿದ್ದಂಗೆ ಕುನಾಲ್ ಕಪೂರ್ ಮತ್ತು ನೈನಾ ಬಚ್ಚನ್ ದಂಪತಿಗಳಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ಬಾಲಿವುಡ್ ನಟರಾದ ಹೃತಿಕ್ ರೋಷನ್, ನೈನಾ ಬಚ್ಚನ್ ಸೋದರ ಸಂಬಂಧಿಗಳಾದ ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್, ಸುಸಾನೆ ಖಾನ್, ಡಿನೋ ಮೋರಿಯಾ ಸೇರಿ ಹಲವು ಕಲಾವಿದರು ಕುನಾಲ್ ಮತ್ತು ನೈನಾ ಬಚ್ಚನ್ ದಂಪತಿಗೆ ಶುಭ ಕೋರಿದ್ದಾರೆ.




