ಮನರಂಜನೆಸಿನಿಮಾಸೆಲೆಬ್ರಿಟಿ

ಮಾಜಿ ಪತ್ನಿ ಬಗ್ಗೆ ಮೊದಲ ಬಾರಿ ಮೌನ ಮುರಿದ ನಾಗಚೈತನ್ಯ

ಟಾಲಿವುಡ್​ನ ಕ್ಯೂಟ್ ಕಪಲ್​​ ಅಂತಾನೇ ಖ್ಯಾತಿಗಳಿಸಿದ್ದ ನಟಿ ಸಮಂತಾ ಹಾಗೂ ನಾಗಚೈತನ್ಯ ಕಳೆದ ಅಕ್ಟೋಬರ್ 2ರಂದು ಬೇರೆ ಬೇರೆಯಾಗೋದಾಗಿ ಘೋಷಿಸಿದ್ದರು. ನಾಲ್ಕು ವರ್ಷಗಳ ಮದುವೆ ಬಂಧನಕ್ಕೆ ಇತಿಶ್ರೀ ಹಾಡಿದ್ದ ಜೋಡಿಗಳು ಬಳಿಕ ಸಿನಿಮಾದಲ್ಲಿ ಬ್ಯುಸಿಯಾಗಿ ಬಿಟ್ರು. ಇದೀಗ ಮೂರು ತಿಂಗಳ ಬಳಿಕ ನಟ ನಾಗಚೈತನ್ಯ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ.

ಅಕ್ಕಿನೇನಿ ನಾಗಾರ್ಜುನ್ ಹಾಗೂ ನಾಗಚೈತನ್ಯ ನಟನೆಯ ಬಂಗಾರ್​ರಾಜು ಚಿತ್ರದ ಸುದ್ದಿಗೋಷ್ಠಿಯಲ್ಲಿ ಮೊಟ್ಟ ಮೊದಲ ಭಾರಿಗೆ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ನಾವಿಬ್ಬರೂ ಬೇರೆ ಬೇರೆಯಾಗಬೇಕು ಎಂಬುದು ಇಬ್ಬರು ಸೇರಿ ತೆಗೆದುಕೊಂಡ ನಿರ್ಧಾರವಾಗಿತ್ತು. ಅಲ್ಲದೇ ಆ ಸಂದರ್ಭದಲ್ಲಿ ನಾವು ತೆಗೆದುಕೊಂಡಿದ್ದು ಉತ್ತಮ ನಿರ್ಧಾರವಾಗಿತ್ತು ಎಂದು ನಾಗಚೈತನ್ಯ ಪ್ರತಿಕ್ರಿಯಿಸಿದ್ದಾರೆ.

ನಾಗಚೈತನ್ಯರಿಂದ ದೂರವಾಗಿರೋ ನಟಿ ಸಮಂತ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರೋ ಪುಷ್ಪ ಸಿನಿಮಾದ ಸ್ಪೆಷನ್ ಡ್ಯಾನ್ಸ್​ಗೆ ಸಮಂತ ಹೆಜ್ಜೆ ಹಾಕಿದ್ದು ಇದು ಸಾಕಷ್ಟು ಸದ್ದು ಮಾಡಿತ್ತು. ಜೊತೆಗೆ ಬ್ರೇಕ್ ಅಪ್ ಬಳಿಕ ನಾನು ಇನ್ನು ನನ್ನ ಬದುಕನ್ನು ಬದುಕಬೇಕು. ಈ ಕಠಿನ ಪರಿಸ್ಥಿತಿಯನ್ನು ಎದುರಿಸಲು ನಾನು ಸಮರ್ಥಳಿದ್ದೇನಾ ಎಂಬನ ಅನುಮಾನ ನನಗಿತ್ತು. ಆದರೆ ನನಗೆ ಅಚ್ಚರಿಯಾಗೋ ರೀತಿಯಲ್ಲಿ ನಾನು ಇದನ್ನೆಲ್ಲಾ ನಿಭಾಯಿಸಿದ್ದಾಗಿ ಸಮಂತ ಹೇಳಿಕೊಂಡಿದ್ದರು.

ನಾಗಚೈತನ್ಯ ನಟನೆಯ ಬಂಗಾರ್​ರಾಜು ಸಿನಿಮಾ ಸಂಕ್ರಾಂತಿಗೆ ತೆರೆಗೆ ಬರೋಕೆ ಸಿದ್ದವಾಗಿದೆ. ಜೊತೆಗೆ ಲಾಲ್ ಸಿಂಗ್ ಚಡ್ಡಾ ಚಿತ್ರದ ಮೂಲಕ ಟಾಲಿವುಡ್​ನಲ್ಲೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇನ್ನೂ ನಟಿ ಸಮಂತ ಯಶೋದ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದು ಶಾಂಕುತಲ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

Spread the love

Related Articles

Leave a Reply

Your email address will not be published. Required fields are marked *

Back to top button