ಮನರಂಜನೆಸಿನಿಮಾಸೆಲೆಬ್ರಿಟಿ

ಲತಾ ಮಂಗೇಶ್ಕರ್ ಅವರ 368 ಕೋಟಿ ಆಸ್ತಿಯ ವಾರಸ್ಥಾರ ಇವರೇನಾ?

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನದ ಬಳಿಕ ಅವರ ಆಸ್ತಿಯ ವಿಚಾರ ಸುದ್ದಿಯಾಗುತ್ತಿದೆ. ಏಳು ದಶಕಗಳ ಕಾಲ ತಮ್ಮ ಹಾಡಿನ ಮೂಲಕ ಶೋತೃಗಳ ಕಿವಿ ಇಂಪಾಗಿಸಿದ್ದ ಲತಾ ಒಟ್ಟು 368 ಕೋಟಿ ಆಸ್ತಿ ಸಂಪಾದನೆ ಮಾಡಿದ್ದಾರೆ. ಇದ್ರ ಜೊತೆಗೆ ಬೆಲೆಬಾಳುವ ಚಿನ್ನಾಭರಣ, ಲಕ್ಷಾಂತರ ಮೌಲ್ಯದ ಕಾರುಗಳು, ಸಾಕಷ್ಟು ಕಡೆ ಆಸ್ತಿ ಲತಾ ಮಂಗೇಶ್ಕರ್ ಹೆಸರಿನಲ್ಲಿವೆ. ಇವೆಲ್ಲಾ ಯಾರ ಪಾಲಾಗುತ್ತೆ ಅನ್ನೋ ಚರ್ಚೆ ಶುರುವಾಗಿದೆ.

1942ರಿಂದ ತಮ್ಮ ವೃತ್ತಿ ಜೀವನ ಆರಂಭಿಸಿದ ಗಾಯಕಿ ಲತಾ ಮಂಗೇಶ್ಕರ್ ಏಳು ದಶಕಗಳ ಕಾಲ ಸಿನಿ ರಸಿಕರನ್ನ ರಂಜಿಸಿದ್ದಾರೆ. ಇಷ್ಟು ವರ್ಷಗಳ ಕಾಲ ತಮ್ಮ ವೃತ್ತಿ ಜೀವನದಲ್ಲಿ ಲತಾ ಮಂಗೇಶ್ಕರ್ ಸಂಪಾದಿಸಿರೋದು ಬರೋಬ್ಬರಿ 368 ಕೋಟಿ ರೂಪಾಯಿ. ಲತಾ ಮಂಗೇಸ್ಕರ್ ಅವರ ಹೆಚ್ಚಿನ ಗಳಿಕೆಯು ಅವರು ಹಾಡುಗಳ ರಾಯಲ್ಟಿ ಹಾಗೂ ಹೂಡಿಕೆಯಿಂದ ಬಂದಿದೆ. ಅಂದ್ಹಾಗೆ ಲತಾ ಮಂಗೇಶ್ಕರ್ ಮದುವೆಯಾಗದ ಕಾರಣಕ್ಕೆ ಲತಾ ಅವರ ಆಸ್ತಿಯ ಮುಂದಿನ ವಾರಸ್ದಾರ ಯಾರು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಲತಾ ಮಂಗೇಶ್ಕರ್ ಅವರಿಗೆ ಮೂವರು ಸಹೋದರಿಯರು ಹಾಗೂ ಒರ್ವ ಸಹೋದರ ಇದ್ದಾರೆ. ಹೀಗಾಗಿ ಲತಾ ಅವರ ಆಸ್ತಿಯಲ್ಲಿ ನಾಲ್ಕ ಮಂದಿಗೂ ಪಾಲುದಾರಿಕೆ ಸಿಗಲಿದೆ ಅನ್ನೋ ಮಾತು ಕೇಳಿ ಬರ್ತಿದೆ. ಅಂದ್ಹಾಗೆ ಲತಾ ಮಂಗೇಶ್ಕರ್ ಕಳೆದ ಒಂದಷ್ಟು ವರ್ಷಗಳಿಂದ ಹಾಡುವುದನ್ನ ನಿಲ್ಲಿಸಿದ್ದರು. ಆದರೂ ಅವರ ಹಾಡಿನಿಂದ ವರ್ಷಕ್ಕೆ 5 ಕೋಟಿಯಷ್ಟು ಸಂಪಾದನೆ ಮಾಡುತ್ತಿದ್ದರು. ಲತಾ ಮಂಗೇಶ್ಕರ್ ನಿಧನದ ಬಳಿಕವೂ ಈ ಹಣ ಸಿಗಲಿದ್ದು ಅದು ಯಾರಿಗೆ ಸೇರಲಿದೆ ಅನ್ನೋ ಚರ್ಚೆ ಹುಟ್ಟಿಕೊಂಡಿದೆ.

ಲತಾ ಮಂಗೇಶ್ಕರ್ ಬದುಕಿದ್ದಾಗಲೇ ಚಾರಿಟೇಬಲ್ ಟ್ರಸ್ಟ್ ಒಂದನ್ನ ಸ್ಥಾಪಿಸಿದ್ರು. ಹೀಗಾಗಿ ಅವರ ಆಸ್ತಿಯಲ್ಲಿ ಕೆಲವು ಭಾಗ ಈ ಟ್ರಸ್ಟ್​ಗೆ ಸೇರಲಿದೆ ಅನ್ನೋ ಮಾತು ಕೇಳಿ ಬರ್ತಿದೆ. ಅಲ್ಲದೆ ಲತಾ ಅವರಿಗೆ ಸಹೋದರ ಸಹೋದರಿಯರ ಮಕ್ಕಳ ಮೇಲೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಮೊಮ್ಮಕ್ಕಳ ಹೆಸರಿಗೆ ಆಸ್ತಿಯನ್ನ ಬರೆದಿರಬಹುದು ಎನ್ನಲಾಗ್ತಿದೆ. 13ನೇ ವಯಸ್ಸಿನಲ್ಲಿ ಪೆಹಲಿ ಮಂಗಳಗೋರ್ ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದ ಲತಾ ಮಂಗೇಶ್ಕರ್ ಮೊದಲು ಘಳಿಸಿದ್ದು 25ರೂಪಾಯಿ.

Spread the love

Related Articles

Leave a Reply

Your email address will not be published. Required fields are marked *

Back to top button