ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ದೊಡ್ಡ ಮಟ್ಟದ ಬದಲಾವಣೆ: ಡಾ.ಪ್ರತೀಕ್

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಆರೋಗ್ಯದ ಕುರಿತು ವೈದ್ಯರು ಸಂತೋಷದ ವಿಚಾರವೊಂದನ್ನ ಹಂಚಿಕೊಂಡಿದ್ದಾರೆ. ಲತಾ ಆರೋಗ್ಯದಲ್ಲಿ ದೊಡ್ಡ ಮಟ್ಟದ ಚೇತರಿಕೆ ಕಂಡು ಬಂದಿದ್ದು ಕೊರೊನಾ ಹಾಗೂ ನ್ಯುಮೋನಿಯ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ 28 ದಿನಗಳಿಂದಲೂ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಕಿ ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ದೊಡ್ಡ ಮಟ್ಟದಲ್ಲಿ ಚೇತರಿಕೆ ಕಂಡು ಬಂದಿದ್ದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಲತಾ ಮಂಗೇಶ್ಕರ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಪ್ರತೀಕ್ ಸಮ್ಧಾನಿ ಲತಾ ಮಂಗೇಶ್ಕರ್ ಅವರ ಆರೋಗ್ಯ ಕೊಂಚ ಮಟ್ಟಿಗೆ ಸುಧಾರಿಸಿದೆ. ಲತಾ ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ಬೆಂಬಲವನ್ನು ತೆಗೆದಿದ್ದು ಸಹಜವಾಗಿ ಉಸಿರಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರ ಆರೋಗ್ಯ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದಿದ್ದರೆ. ಅಂತೆಯೇ ಇದೀಗ ಲತಾ ಮಂಗೇಶ್ಕರ್ ಕೊವಿಡ್ ಹಾಗೂ ನ್ಯುಮೋನಿಯದಿಂದ ಗುಣಮುಖರಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಲತಾ ಮಂಗೇಶ್ಕರ್ ತಂಡ ಲತಾ ಅವರ ಆರೋಗ್ಯ ಸಾಕಷ್ಟು ಸುಧಾರಿಸಿದೆ. ಈ ಸಮಯದಲ್ಲಿ ಯಾರು ಸಹ ಸುಳ್ಳು ಸಂದೇಶವನ್ನು ಪ್ರಸಾರ ಮಾಡಬೇಡಿ. ದೀದಿ ಶೀಘ್ರದಲ್ಲೇ ಮನೆಗೆ ಮರಳಿದ್ದಾರೆ ಎಂದಿದ್ದಾರೆ.
1942ರಲ್ಲಿ ತಮ್ಮ 13ನೇ ವಯಸ್ಸಿನಲ್ಲೇ ಹಾಡಿನ ವೃತ್ತಿ ಜೀವನವನ್ನ ಆರಂಭಿಸಿದ ಲತಾ ಮಂಗೇಶ್ಕರ್ ವಿವಿಧ ಭಾಷೆಗಳಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಭಾಷೆಯ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಏಳು ದಶಕಗಳ ವೃತ್ತಿ ಜೀವನದಲ್ಲಿ ಪದ್ಮ ಭೂಷಣ, ಪದ್ಮ ವಿಭೂಷಣ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಲತಾ ಅವರನ್ನ ಅರಸಿಕೊಂಡು ಬಂದಿದೆ.
ಕ್ವೀನ್ ಆಫ್ ಮೆಲೋಡಿ, ನೈಟಿಂಗೇಲ್ ಆಫ್ ನಾರ್ಥ್ ಇಂಡಿಯಾ ಸೇರಿದಂತೆ ನಾನಾ ಬಿರುದುಗಳಿಂದ ಕರೆಯಲ್ಪಡುವ ಭಾರತದ ಹೆಮ್ಮೆಯ ಗಾಯಕಿ ಲತಾ ಮಂಗೇಶ್ಕರ್ ಆದಷ್ಟು ಬೇಗ ಮನೆಗೆ ಮರಳಲಿ.




