ಮನರಂಜನೆಸಿನಿಮಾಸ್ಯಾಂಡಲ್ ವುಡ್

ಸೋಷಿಯಲ್ ಮೀಡಿಯಾ ವಾರ್ ಗೆ ಪರೋಕ್ಷವಾಗಿ ಉತ್ತರಿಸಿದ ಕಿಚ್ಚ ಸುದೀಪ್

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಸಿನಿಮಾ ದೇಶದೆಲ್ಲೆಡೆ ಸದ್ದು ಮಾಡ್ತಿದೆ. ರಾಕಿ ಬಾಯ್ ನಟನೆಗೆ ಪ್ರತಿಯೊಬ್ಬ ಪರಭಾಷೆಯ ಕಲಾವಿದರು ಜೈಕಾರ ಹಾಕ್ತಿದ್ದಾರೆ. ಆದ್ರೆ ಕಿಚ್ಚ ಸುದೀಪ್ ಮಾತ್ರ ಕೆಜಿಎಫ್ 2 ಚಿತ್ರದ ಕುರಿತಾಗಿ ಪೋಸ್ಟ್ ಹಾಕಿಲ್ಲ ಅಂತ ಸೋಷಿಯಲ್ ಮೀಡಿಯಾದಲ್ಲಿ ವಾರ್ ನಡೆಯುತ್ತಿದೆ. ಈ ವಿಚಾರವಾಗಿ ಸುದೀಪ್ ಪರೋಕ್ಷವಾಗಿ ಉತ್ತರಿಸಿದ್ದಾರೆ.

ನವರಸ ನಾಯಕ ಜಗ್ಗೇಶ್ ಮತ್ತು ಅದಿತಿ ನಟನೆಯ ತೋತಾಪುರಿ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸುದೀಪ್ ಭಾಗವಹಿಸಿದ್ರು. ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ ಸುದೀಪ್ ನಿರೂಪಕಿಯ ಪ್ರಶ್ನೆಗೆ ಉತ್ತರಿಸುವ ಮೂಲಕ ಸೋಷಿಯಲ್ ಮೀಡಿಯಾ ವಾರ್ ಗೆ ಪರೋಕ್ಷವಾಗಿ ಉತ್ತರ ನೀಡಿದ್ರು.

ನಟ ಸುದೀಪ್ ಕನ್ನಡ ಸಿನಿಮಾಗಳಿಗೆ ಬೆಂಬಲ ನೀಡುತ್ತಾರೆ. ಇಡೀ ಸಿನಿಮಾ ರಂಗವನ್ನು ಕುಟುಂಬದಂತೆ ನೋಡುತ್ತಾರೆ ಎಂದ ನಿರೂಪಕಿಗೆ ಥಟ್ ಅಂತಾ ಸುದೀಪ್ ಉತ್ತರಿಸಿ, ಸಿನಿಮಾಗೆ ನಾನು ಸಪೋರ್ಟ್ ನೀಡಿಲ್ಲಾ ಅಂದ್ರು ಸುದ್ದಿಯಲ್ಲಿ ಇರ್ತೀನಿ ಅಂತಾ ಉತ್ತರಿಸಿದ್ದಾರೆ. `ಕೆಜಿಎಫ್ 2′ ಚಿತ್ರದ ಬಗ್ಗೆ ಸುದೀಪ್ ಮೌನ ವಹಿಸಿರೋದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಜಿಎಫ್ ಚಿತ್ರದ ಕುರಿತು ಮಾತನಾಡಿದ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಸಾಕಷ್ಟು ಚೆರ್ಚೆಗೆ ಗ್ರಾಸವಾಗಿದೆ. ಅದಕ್ಕೆ ಸುದೀಪ್ ಹೀಗೆ ಮಾತನಾಡಿರಬಹುದು ಅನ್ನೋ ಮಾತುಗಳು ಕೇಳಿ ಬರ್ತಿದೆ.

Related Articles

Leave a Reply

Your email address will not be published. Required fields are marked *

Back to top button