ಕನ್ನಡದ ವಲಿಮೈ ಟ್ರೈಲರ್ ಮೆಚ್ಚಿದ ಕಿಚ್ಚ ಸುದೀಪ್

ಕೋವಿಡ್ ಕಾರಣದಿಂದ ಒಂದಷ್ಟು ದಿನಗಳ ಕಾಲ ಮಂಕಾಗಿದ್ದ ಸಿನಿಮಾ ರಂಗ ಇದೀಗ ಗರಿಗೆದರಿ ನಿಂತಿದೆ. ಸಾಲು ಸಾಲು ಸಿನಿಮಾಗಳು ತೆರೆಗೆ ಬರೋಕೆ ಸಜ್ಜಾಗಿದ್ದು ಚಿತ್ರ ನೋಡೋಕೆ ಅಭೀಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳು ಸಾಕಷ್ಟು ರಿಲೀಸ್ ಆಗ್ತಿದ್ದು ಸದ್ಯ ಅಜಿತ್ ನಟನೆಯ ತಮಿಳಿನ ವಲಿಮೈ ಚಿತ್ರದ ಟ್ರೈಲರ್ರನ್ನ ಕಿಚ್ಚ ಸುದೀಪ್ ಮೆಚ್ಚಿಕೊಂಡಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ಗೆ ಕನ್ನಡದಲ್ಲಿ ಮಾತ್ರವಲ್ಲ ಪರಭಾಷೆಯಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಸುದೀಪ್ ಅಲ್ಲಿನ ಕಲಾವಿದರ ಜೊತೆ ಉತ್ತಮ ಬಾಂದವ್ಯ ಹೊಂದಿದ್ದಾರೆ. ಹೀಗಾಗಿಯೇ ಪರಭಾಷೆಯ ನಟರ ಸಿನಿಮಾಗಳು ರಿಲೀಸ್ ಆದಾಗ ಸುದೀಪ್ ಪ್ರತಿಕ್ರಿಯ ನೀಡೋದು ಕಾಮನ್. ಇದೀಗ ಸುದೀಪ್ ತಮಿಳಿನ ಅಜಿತ್ ನಟನೆಯ ವಲಿಮೈ ಚಿತ್ರದ ಕನ್ನಡ ಟ್ರೈಲರ್ರನ್ನ ಮೆಚ್ಚಿಕೊಂಡಿದ್ದಾರೆ.
ವಲಿಮೈ ಚಿತ್ರದ ಕನ್ನಡ ಅವತರಣಿಕೆಯ ಟ್ರೈಲರ್ರನ್ನ ಸುದೀಪ್ ತಮ್ಮ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಆಕ್ಷನ್ ಥ್ರಿಲರ್ ಕಥೆಯಿರುವ ವಲಿಮೈ ಚಿತ್ರಕ್ಕೆ ಸಿದ್ದರಾಗಿ. ಇದೇ ಫೆಬ್ರವರಿ 24ರಂದು ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಬರೆದುಕೊಂಡಿದ್ದಾರೆ.
ಅಜಿತ್ ನಟನೆಯ ವಲಿಮೈ ಚಿತ್ರದಲ್ಲಿ ಅಜಿತ್ಗೆ ಜೋಡಿಯಾಗಿ ಹುಮಾ ಖುರೇಷಿ ಕಾಣಿಸಿಕೊಳ್ತಿದ್ದಾರೆ. ಬೋನಿ ಕಪೂರ್ ನಿರ್ಮಾಣದಲ್ಲಿ ರೆಡಿಯಾಗಿರೋ ಸಿನಿಮಾ ಅದ್ದೂರಿ ಬಜೆಟ್ನಲ್ಲಿ ನಿರ್ಮಾಣವಾಗಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಅರ್ಜುನ್ ಹೆಸರಿನ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಜಿತ್ ಕಾಣಿಸಿಕೊಂಡಿದ್ದಾರೆ. ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳನ್ನು ಬೇದಿಸುವ ಅಧಿಕಾರಿಯಾಗಿ ಅಜಿತ್ ಬಣ್ಣ ಹಚ್ಚಿದ್ದಾರೆ.



