ಮನರಂಜನೆಸಿನಿಮಾಸೆಲೆಬ್ರಿಟಿ
ಆಶ್ರಮ ಶಾಲೆಗಳಿಗೆ ಪುಸ್ತಕ ಕೊಡುಗೆ ನೀಡಿದ ಸುದೀಪ್ ಚಾರಿಟೇಬಲ್ ಟ್ರಸ್ಟ್

73ನೇ ಗಣರಾಜ್ಯೋತ್ಸವ ಪ್ರಯುಕ್ತ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದತ್ತು ಪಡೆದುಕೊಂಡಿರುವ ಶಾಲೆಗಳಿಗೆ ರಾಷ್ಟ್ರಕವಿ ಕುವೆಂಪು ಭಂಡಾರದ ಪುಸ್ತಕಗಳನ್ನ ಕೊಡುಗೆಯಾಗಿ ನೀಡಿದರು.
ಸಾಗರ ನಗರಸಭೆ ವ್ಯಾಪ್ತಿಯ ಎಸ್ಎನ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ದತ್ತು ಪಡೆದುಕೊಂಡಿದೆ. ಶಾಲೆಗೆ ಭೇಟಿ ನೀಡಿದ ಟ್ರಸ್ಟ್ನ ರಾಜ್ಯಾಧ್ಯಕ್ಷ ಕೃಷ್ಣ ಕಿಟ್ಟಿ ಪುಸ್ತಕಗಳನ್ನ ಶಾಲೆಯ ಮುಖ್ಯೋಪಾಧ್ಯಾಯರಾದ ರಾಜಬಕ್ಷಿ ಅವರಿಗೆ ಹಸ್ತಾಂತರಿಸಿದರು. ಜೊತೆಗೆ ಚಿತ್ರದುರ್ಗದ ಶಾಲೆಗಳಿಗೂ ಭೇಟಿ ನೀಡಿ ಪುಸ್ತಕಗಳನ್ನ ಕೊಡುಗೆಯಾಗಿ ನೀಡಿದರು.




