ಮನರಂಜನೆಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್
ಡಬ್ಬಿಂಗ್ ಸ್ಟುಡಿಯೋಗೆ ಎಂಟ್ರಿಕೊಟ್ಟ ರಾಘವೇಂದ್ರ ಸ್ಟೋರ್ಸ್

ನವರಸನಾಯಕ ಜಗ್ಗೇಶ್ ನಟನೆಯ ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು ಡಬ್ಬಿಂಗ್ ಕೆಲಸಗಳು ಆರಂಭಗೊಂಡಿದೆ. ಮಲೆನಾಡು, ಮೈಸೂರು ಸೇರಿದಂತೆ ಸಾಕಷ್ಟು ಕಡೆ ಶೂಟಿಂಗ್ ಮಾಡಿದ್ದ ಚಿತ್ರತಂಡ ಇದೀಗ ಡಬ್ಬಿಂಗ್ ಸ್ಟುಡಿಯೋಗೆ ಎಂಟ್ರಿಕೊಟ್ಟಿದ್ದು ಜಗ್ಗೇಶ್ರ ಡಬ್ಬಿಂಗ್ ಕೆಲಸಗಳು ನಡೆಯುತ್ತಿವೆ. ಹೊಂಬಾಳೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗ್ತಿರೋ 12 ಸಿನಿಮಾವಾಗಿರೋ ರಾಘವೇಂದ್ರ ಸ್ಟಾರ್ಸ್ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದ್ದು ಈಗಾಗ್ಲೆ ಚಿತ್ರದ ಕಥೆಯನ್ನ ಕೇಳಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಥೆಯನ್ನ ಮೆಚ್ಚಿಕೊಂಡಿದ್ರು.
ಈಗಾಗ್ಲೆ ಬಿಡುಗಡೆಯಾಗಿರೋ ಚಿತ್ರದ ಫಸ್ಟ್ಲುಕ್ನಲ್ಲಿ, ಜಗ್ಗೇಶ್ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಲುಕ್ನಲ್ಲಿ ಸಿನ್ಸ್ 1972 ಎಂದು ಟ್ಯಾಗ್‌ಲೈನ್ ಇದ್ದು, ಜಗ್ಗೇಶ್ ಇದುವರೆಗೆ ಮಾಡಿರುವ ಪಾತ್ರಕ್ಕಿಂತ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.




