
ಅದೆಷ್ಟೋ ಕಲಾವಿದರಿಗೆ ಬಾಲಿವುಡ್ ನಲ್ಲಿ ಒಂದಾದ್ರು ಸಿನಿಮಾ ಮಾಡ್ಬೇಕು ಅನ್ನೋ ಆಸೆ ಇದ್ದೆ ಇರುತ್ತೆ. ಬಾಲಿವುಡ್ ಚಿತ್ರರಂಗದಲ್ಲಿ ನಟಿಸಿದ್ರೆ ಖ್ಯಾತಿಯ ಜೊತೆಗೆ ಸಂಭಾವನೆಯೂ ಹೆಚ್ಚಾಗುತ್ತೆ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತಿದೆ. ಹೀಗಾಗಿಯೇ ಬಂದ ತಕ್ಷಣವೇ ಆಫರ್ ಒಪ್ಪಿಕೊಂಡು ಬಿಡ್ತಾರೆ. ಈಗಾಗಲೇ ನಟ ರಾಮ್ ಚರಣ್, ವಿಜಯ್ ದೇವರಕೊಂಡ ಸೇರಿದಂತೆ ಸಾಕಷ್ಟು ನಟರು ಬಾಲಿವುಡ್ ಪ್ರವೇಶಿಸಿದ್ದಾರೆ. ಆದ್ರೆ ನಟ ಮಹೇಶ್ ಬಾಬು ಮಾತ್ರ ಈ ಬಗ್ಗೆ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ.
ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ ಸಿನಿಮಾ ಇದೇ ಏಪ್ರಿಲ್ 12ರಂದು ರಿಲೀಸ್ ಆಗ್ತಿದೆ. ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದ್ದು ಚಿತ್ರದಲ್ಲಿ ಮಹೇಶ್ ಬಾಬು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗ್ಲೆ ಸರ್ಕಾರು ವಾರಿ ಪಾಟ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ಸಿನಿಮಾದ ಪ್ರಚಾರದಲ್ಲಿರೋ ಮಹೇಶ್ ಬಾಬುಗೆ ಅಭಿಮಾನಿಯೊಬ್ಬರು ಬಾಲಿವುಡ್ ನಲ್ಲಿ ಯಾವಾಗ ಸಿನಿಮಾ ಮಾಡ್ತೀರಾ ಎಂದು ಕೇಳಿದ್ದಾರೆ.
ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ಮಹೇಶ್ ಬಾಬು ನನಗೆ ಹಿಂದಿ ಸಿನಿಮಾ ಮಾಡುವ ಅಗತ್ಯವಿಲ್ಲ. ನಾನು ಕೇವಲ ತೆಲುಗು ಸಿನಿಮಾಗಳನ್ನು ಮಾತ್ರ ಮಾಡುತ್ತೇನೆ. ಅದು ಪ್ರಪಂಚದಾದ್ಯಂತ ಕಾಣಿಸುತ್ತದೆ. ಈಗ ಅದೇ ನಡೆಯುತ್ತಿದೆ ಎಂದು ಹೇಳಿದ್ದಾರೆ. ಮಹೇಶ್ ಬಾಬು ಮಾತನಾಡಿದ ವಿಡಿಯೋ ಸಖತ್ ವೈರಲ್ ಆಗಿದ್ದು ತೆಲುಗು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.




