Latestಮನರಂಜನೆಸಿನಿಮಾ

ಸುಸೇನ್ ತೊಟ್ಟ ಡ್ರಸ್ ಬಗ್ಗೆ ಹೃತಿಕ್ ಹೇಳಿದ್ದೇನು ಗೊತ್ತಾ?

ಬಿಟೌನ್ ನಟ ಹೃತಿಕ್ ರೋಷನ್ ತನ್ನ ಮಾಜಿ ಪತ್ನಿ ಸುಸೇನ್ ಖಾನ್ ಜೊತೆ ವಿಚ್ಛೇದನವಾದ್ರೂ ಸಹ ಅವರಿಬ್ಬರ ನಡುವೆ ಉತ್ತಮ ಬಾಂಧವ್ಯ ಇದೆ. ಹಾಗಾಗಿ ಅವರಿಬ್ಬರು ಆಗಾಗ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಅಷ್ಟೇ ಅಲ್ಲ ಅವರಿಬ್ಬರು ಮಕ್ಕಳ ಜೊತೆ ಟ್ರಿಪ್ ಗೆ ಹೋಗುತ್ತಿರುತ್ತಾರೆ.

ಇದೀಗ ಮತ್ತೆ ಹೃತಿಕ್ ರೋಷನ್ ಸುದ್ದಿಯಲ್ಲಿ ಇದ್ದಾರೆ. ಯಾಕೆಂದರೆ ತಮ್ಮ ಮಾಜಿ ಪತ್ನಿ ಸುಸೇನ್ ಖಾನ್ ಅವರು ಧರಿಸಿದ ಉಡುಪಿನ ಬಗ್ಗೆ ಕಮೆಂಟ್ ಮಾಡಿದ್ದಾರೆ. ಇತ್ತೀಚೆಗೆ ಸುಸೇನ್ ಅವರು ತಮ್ಮ ಇನ್ಸ್ ಟಾಗ್ರಾಂನಲ್ಲಿ ಜಿಮ್ ಉಡುಪು ತೊಟ್ಟು ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದರು. ಈ ಪೋಸ್ಟ್ ಗೆ ಹೃತಿಕ್ ಪ್ರತಿಕ್ರಿಯೆ ನೀಡಿದ್ದು, ಹಹಾ ನನಗೆ ಶಾರ್ಟ್ಸ್ ಅಂದರೆ ತುಂಬಾ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ಅಂದಹಾಗೆ ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ 2000ರಲ್ಲಿ ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ಕಾರಣಾಂತರಗಳಿಂದ 2014ರಲ್ಲಿ ಈ ಜೋಡಿ ವಿಚ್ಛೇದನದ ಮೂಲಕ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು.

Related Articles

Leave a Reply

Your email address will not be published. Required fields are marked *

Back to top button