ಹ್ಯಾಪಿ ಬರ್ತ್ ಡೇ ಟು “ಶಿವ ಶಕ್ತಿ” ಗೀತಾ!

ಪೂರ್ಣ ವಿ-ರಾಮ
ಇಂದು ಶಿವರಾಜ್ ಕುಮಾರ್ ಧರ್ಮಪತ್ನಿ ಗೀತಾ ಶಿವರಾಜ್ ಕುಮಾರ್ ಜನುಮದಿನ. ಹಿರಿಯ ರಾಜಕಾರಣಿ ಬಂಗಾರಪ್ಪನವರ ಮಗಳೂ, ಕನ್ನಡ ಚಿತ್ರರಂಗದ ಮೇರು ಕಲಾವಿದ ಡಾಕ್ಟರ್ ರಾಜ್ ಕುಮಾರ್ ಸೊಸೆಯೂ, ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಮಾಜಿ ಜೆಡಿಎಸ್ ಮುಖಂಡರೂ ಆಗಿರುವ ಚಿತ್ರರಂಗದ ಪಾಲಿನ ಪ್ರೀತಿಯ ಗೀತಕ್ಕನಾಗಿರುವ ಗೀತಾ ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
ಶಿವಣ್ಣನ ಮನಮೆಚ್ಚಿದ ಮಡದಿ!
ಗೀತಾ ಶಿವರಾಜ್ ಕುಮಾರ್ ಆ ಇಡೀ ಮನೆಯ ಹೋಮ್ ಮಿನಿಸ್ಟರ್. ಶಿವರಾಜ್ ಕುಮಾರ್ ಅವರ ಟೈಮ್ ಟೇಬಲ್ ಇಂದ ಹಿಡಿದು, ಅವರ ಶೂಟಿಂಗ್ ಶೆಡ್ಯೂಲ್ ಇಂದ ಹಿಡಿದು, ಪ್ರತೀ ಹೆಜ್ಜೆಯಲ್ಲೂ ಜವಾಬ್ದಾರಿ ಹೊತ್ತಿರುವವರು ಗೀತಕ್ಕ. ಒಬ್ಬ ಪರಿಪೂರ್ಣ ಗೃಹಿಣಿಯಾಗಿ, ಶಿವರಾಜ್ ಕುಮಾರ್ ಅವರ ಪ್ರೊಡಕ್ಷನ್ ಹೌಸ್ ಕಂಟ್ರೋಲರ್ ಆಗಿ, ಜೊತೆ ರಾಜಕಾರಣದಲ್ಲೂ ಸಕ್ರೀಯವಾಗಿ ತೊಡಗಿಕೊಂಡಿರುವ ಗೀತಮ್ಮ ಪಾರ್ವತಮ್ಮನವರಿಂದ ಕಲಿತದ್ದು ಸಾಕಷ್ಟಿದೆ ಎನ್ನುವುದು ಅವರ ಬಿಹೇವಿಯರ್ ನಿಂದ ಗೊತ್ತಾಗುತ್ತದೆ. ಈ ಎಲ್ಲದರ ನಡುವೆ ಶಿವರಾಜ್ ಕುಮಾರ್ ಅವರ ಕಾಸ್ಟ್ಯೂಮ್ ಡಿಸೈನರ್ ಕೂಡ ಅವರೇ ಆಗಿರುತ್ತಾರೆ.
ಜೆಡಿಎಸ್ ಟು ಕಾಂಗ್ರೆಸ್!
ತೀರಾ ಇತ್ತೀಚೆಗೆ ಅಂದರೆ ನಾಲ್ಕು ತಿಂಗಳ ಹಿಂದೆ ಗೀತಾ ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಶಿಫ್ಟ್ ಆಗಿದ್ದಾರೆ. ಸಹೋದರ ಮಧು ಬಂಗಾರಪ್ಪ ಜೊತೆ ಅವರು ಸಹ ಕೈ-ಜೋಡಿಸಿದ್ದಾರೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಸೋತಿದ್ದರು. ಇದೀಗ ಕಾಂಗ್ರೆಸ್ ಪಕ್ಷಕ್ಕೆ ಜಾಯಿನ್ ಆಗಿದ್ದಾರೆ.
ಶಿವಣ್ಣನ ಪರ್ಸ್ ಗೀತಕ್ಕನ ಕೈಯಲ್ಲಿರುತ್ತೆ!
ಹೌದು, ಗೀತಾ ಶಿವರಾಜ್ ಕುಮಾರ್ ಆ ವಿಷಯದಲ್ಲಿ ತುಂಬಾ ಸ್ಟ್ರಿಕ್ಟ್. ಶಿವಣ್ಣನ ಹತ್ತಿರ ಪರ್ಸ್ ಇದ್ದುಬಿಟ್ಟರೆ, ಅದರಲ್ಲಿ ಒಂದಷ್ಟು ದುಡ್ಡು ಇದ್ದುಬಿಟ್ಟರೆ ಅದು ಕಷ್ಟದಲ್ಲಿದ್ದೇವೆ ಎಂದು ಕೈಚಾಚುವವರ ಪಾಲಾಗಿಬಿಡುತ್ತದೆ. ಆ ವಿಷಯದಲ್ಲಿ ಶಿವಣ್ಣನಿಗೆ ಕಂಟ್ರೋಲ್ ಎನ್ನುವುದೇ ಇಲ್ಲ. ದಾನ ಕೊಡುವುದಕ್ಕೆ ಗೀತಕ್ಕ ಪ್ರಶ್ನೆ ಮಾಡುವುದಿಲ್ಲ. ಆದರೆ ಕೇಳುತ್ತಿರುವುದು ಯಾರು? ಅವರಿಗೆ ನಿಜಕ್ಕೂ ಕಷ್ಟ ಇದೆಯಾ ಎಂದು ಅರ್ಥ ಮಾಡಿಕೊಂಡು ದಾನ ಮಾಡಬೇಕು ಎನ್ನುವುದು ಗೀತಾ ಅವರ ಧೋರಣೆ. ಅದೇ ಕಾರಣಕ್ಕೆ ಶಿವಣ್ಣನ ಪರ್ಸ್ ಗೀತಕ್ಕನ ಬ್ಯಾಗಲ್ಲಿರುತ್ತದೆ. ದಾನ ಧರ್ಮದ ವಿಷಯದಲ್ಲಿ ಗೀತಕ್ಕ ಕಮ್ಮಿ ಇಲ್ಲ. ಅಂಥ ಸಮೃದ್ಧ, ಸುಶೀಲ, ಸಭ್ಯ ಗುಣದ ಗೀತಾ ಶಿವರಾಜ್ ಕುಮಾರ್ ಅವರಿಗೆ ಒನ್ಸ್ ಅಗೇನ್ ಹ್ಯಾಪಿ ಬರ್ತ್ ಡೇ!




