ಪೊನ್ನಿಯಿನ್ ಸೆಲ್ವನ ಚಿತ್ರೀಕರಣದಲ್ಲಿ ದುರ್ಘಟನೆ; ನಿರ್ದೇಶಕ ಮಣಿರತ್ನಂ ವಿರುದ್ಧ ಎಫ್ ಐಆರ್ ದಾಖಲು

ಪೊನ್ನಿಯಿನ್ ಸೆಲ್ವನ ಚಿತ್ರದ ಚಿತ್ರೀಕರಣಕ್ಕೆ ಬಳಸಲಾಗಿದ್ದ ಕುದುರೆಯೊಂದು ಮುಖಾಮುಖಿ ಡಿಕ್ಕಿಯಿಂದ ಸಾವನ್ನಪ್ಪಿದ ಕಾರಣ ನಿರ್ದೇಶಕ ಮಣಿರತ್ನಂ ಮತ್ತು ಕುದುರೆ ಮಾಲೀಕನ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಪೊನ್ನಿಯಿನ್ ಸೆಲ್ವನ ಚಿತ್ರದ ಚಿತ್ರೀಕರಣ ತ್ವರಿತಗತಿಯಲ್ಲಿ ಸಾಗುತ್ತಿದೆ. ಐಶ್ವರ್ಯ ರೈ ಬಚ್ಚನ್, ವಿಕ್ರಮ್, ತ್ರಿಷಾ, ಜಯಂ ರವಿ, ಕಾರ್ತಿ ಮತ್ತು ಪ್ರಕಾಶ್ ರಾಜ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ ಹೈದರಾಬಾದ್ ನ ಚಿತ್ರೀಕರಣದ ವೇಳೆ ದುರ್ಘಟನೆಯೊಂದು ಸಂಭವಿಸಿದೆ.
ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ ಚಿತ್ರ ಒಂದು ಕಾಲದ ಯುದ್ಧದ ಕಥೆಯಾಗಿರುವುದರಿಂದ ಚಿತ್ರೀಕರಣದ ಸಮಯದಲ್ಲಿ ಬಹಳಷ್ಟು ಕುದುರೆಗಳನ್ನು ಬಳಸಿದ್ದಾರೆ. ಆ ವೇಳೆ ಶೂಟಿಂಗ್ ಮಾಡುವಾಗ ಕುದುರೆಯೊಂದು ಮುಖಾಮುಖಿ ಡಿಕ್ಕಿಯಾಗಿ ಸಾವನಪ್ಪಿದೆ. ಈ ಬಗ್ಗೆ ನಿರ್ದೇಶಕ ಮತ್ತು ಕುದುರೆ ಮಾಲೀಕನ ವಿರುದ್ಧ ಪೆಟಾ ದೂರು ದಾಖಲಿಸಿದೆ. ಈ ಹಿನ್ನಲೆಯಲ್ಲಿ ಪ್ರಾಣಿ ಕಲ್ಯಾಣ ಮಂಡಳಿ ಮಣಿರತ್ನಂ ಅವರನ್ನು ವಿಚಾರಣೆಗೆ ಕರೆದಿದ್ದಾರೆ ಎನ್ನಲಾಗಿದೆ




