Latestಮನರಂಜನೆ

ದರ್ಶನ್ ಹೆಸರಲ್ಲಿ ಡುಪ್ಲಿಕೇಟ್ ಪೋಸ್ಟ್!!!

ಇದೇ ಇಪ್ಪತ್ತನೇ ತಾರೀಕು ವರ್ಡ್ಸ್ ಫಾದರ್ಸ್ ಡೇ. ತಂದೆಯ ಸವಿನೆನಪಲ್ಲಿ ತುಂಬಾ ಸೆಲೆಬ್ರಿಟಿಗಳು ತಮ್ಮ ಜನುಮದಾತರ ಫೋಟೋ ಜೊತೆಗೆ ಒಂದಷ್ಟು ಬರಹ ಮುಖೇನ ತಮ್ಮ ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ. ಆದರೆ ಇಲ್ಲೊಬ್ಬ ಆಸಾಮಿ ನಾಯಕ ನಟ ದರ್ಶನ್ ಹೆಸರಲ್ಲಿ ಸುದೀಪ್ ಅವರ ಹೆಸರು ಬಳಸಿ, ಟ್ವೀಟ್ ಮಾಡುವ ಮೂಲಕ ಅವರಿಬ್ಬರ ನಡುವೆ ಹಳಸಿಕೊಂಡಿರುವ ಸ್ನೇಹಕ್ಕೆ, ಮುನಿಸಿಕೊಂಡಿರುವ ಕೋಪಕ್ಕೆ ತುಪ್ಪ ಸುರಿದಿದ್ದಾನೆ!

ದರ್ಶನ್ ತೂಗುದೀಪ ಹೆಸರಲ್ಲಿ ಟ್ವೀಟ್!

“ಅಪ್ಪನ ದಿನಾಚರಣೆ ಶುಭಾಶಯ. ಕಿಚ್ಚ ಸುದೀಪ ನಿನ್ನ ಭಿಕ್ಷೆಯಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ನಿಮ್ಮ ಈ ಭಿಕ್ಷೆಗೆ ಎಂದೆಂದಿಗೂ ಚಿರಋಣಿಯಾಗಿರಲು ಇಚ್ಛಿಸುತ್ತೇನೆ!”

ಈ ರೀತಿಯಲ್ಲಿ ಪೋಸ್ಟ್ ಒಂದನ್ನು ಹಾಕಿರುವ ಡುಪ್ಲಿಕೇಟ್ ಖಾತೆದಾರ, ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ನಡುವೆ ಬಿರುಕು ಮೂಡಿಸುವ ಉದ್ದೇಶದಿಂದಲೇ ಹಾಗೆ ಪೋಸ್ಟ್ ಮಾಡಿದ್ದಾನೆ ಎನ್ನುವುದು ಮೇಲ್ನೋಟಕ್ಕೆ ಅಷ್ಟೇ ಅಲ್ಲ. ಒಳನೋಟಕ್ಕೂ ಗೊತ್ತಾಗಿಬಿಡುತ್ತದೆ. ದರ್ಶನ್ ಹಾಗೂ ಸುದೀಪ್ ನಡುವೆ ಕಿತ್ತಾಟ ಇಲ್ಲದೇ ಇದ್ದರೂ, ಮೌನವಾಗಿಯೇ ಇಬ್ಬರೂ ದೂರ ದೂರವೇ ಇದ್ದರೂ ಅವರ ಅಭಿಮಾನಿಗಳ ಕಿತ್ತಾಟ ಕೂಗಾಟ (ಸೋಷಿಯಲ್ ಮೀಡಿಯಾದಲ್ಲಿ) ಇದ್ದೇ ಇದೆ. ಅದನ್ನು ಗೊತ್ತುಮಾಡಿಕೊಂಡಿರುವ ಫೇಕ್ ಖಾತೆದಾರ ಇದೀಗ ಇಂಥದೊಂದು ಪೋಸ್ಟ್ ಹಾಕುವ ಮೂಲಕ ಇಬ್ಬರ ಅಭಿಮಾನಿಗಳನ್ನೂ ಕೆಣಕಿದ್ದಾನೆ. ಕೆಣಕಿ ಸುಮ್ಮನಾಗಿ ಎಲ್ಲೋ ಕೂತು ಚಂದ ನೋಡುತ್ತಿದ್ದಾನೆ!

ಅಭಿಮಾನಿಗಳ ಮಧ್ಯೆ ಆಗಲಿಂದಲೂ ಒಳಜಗಳ!

ಸುದೀಪ್ ಹಾಗೂ ದರ್ಶನ್ ತುಂಬಾ ಚೆನ್ನಾಗಿಯೇ ಇದ್ದರು. ಒಟ್ಟಿಗೇ ಕ್ರಿಕೆಟ್ ಆಡುತ್ತಿದ್ದರು. ಒಟ್ಟಿಗೇ ಸಿನೆಮಾ ಮಾಡಬೇಕು ಎನ್ನುವ ಹಂತದಲ್ಲಿ ಫ್ರೆಂಡ್ಸ್ ಆಗಿದ್ದರು. ಆದರೆ ಅದೊಂದು ಫೈನ್ ಮಾರ್ನಿಂಗ್ ಇಬ್ಬರ ನಡುವೆಯೂ ಕಲಹ ಶುರುವಾಗಿ ಒಬ್ಬರಿಗೊಬ್ಬರು 63ರಂತಿದ್ದವರು 36 ಆಗಿಬಿಟ್ಟರು. ಆ ಮುಖ ಈ ಮುಖ ಮಾಡಿಕೊಂಡು ದೂರವಾಗಿಬಿಟ್ಟರು. ಅಲ್ಲಿಂದ ಅವರಿಬ್ಬರ ಫ್ಯಾನ್ಸ್ ಮಧ್ಯೆ ಹತ್ತಿಕೊಂಡ ಬೆಂಕಿ ಇವತ್ತಿಗೂ ಆರಿಲ್ಲ. ಈ ಮಧ್ಯೆ ಕೆಲವರು ನಕಲಿ ಖಾತೆಯ ಮೂಲಕ ಇವರು ಅವರಿಗೆ ಏನೋ ಹೇಳಿದಂತೆ, ಅವರು ಇವರಿಗೆ ಏನೋ ಕಾಂಮೆಂಟ್ ಮಾಡಿದಂತೇ ಆಟ ಆಡುತ್ತಿದ್ದಾರೆ. ಮಜಾ ತೆಗೆದುಕೊಳ್ಳುತ್ತಿದ್ದಾರೆ. ಇಂಥವರ ವಿರುದ್ಧ ಸೈಬರ್ ಕ್ರೈಮ್ ನವರೂ ಒಂದು ಕಣ್ಣು ಇಟ್ಟರೆ ಒಳ್ಳೆಯದು!

Spread the love

Related Articles

Leave a Reply

Your email address will not be published. Required fields are marked *

Back to top button