ಲತಾ ಮಂಗೇಶ್ಕರ್ ಕೊನೆಯ ಕ್ಷಣ ಬಿಚ್ಚಿಟ್ಟ ಡಾ.ಪ್ರತೀಕ್ ಸಮ್ದಾನಿ

92 ವರ್ಷ ವಯಸ್ಸಿನ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಲತಾ ಅವರ ಆರೋಗ್ಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಡಾ.ಪ್ರತೀಕ್ ಸಮ್ದಾನಿ ಲತಾ ಅವರ ಆರೋಗ್ಯದ ಕುರಿತು ಆಗಾಗ ಆಪ್ಡೇಟ್ ಮಾಡುತ್ತಲೆ ಇದ್ದರು. ಇದೀಗ ಪ್ರತೀಕ್ ಲತಾ ಮಂಗೇಶ್ಕರ್ ಕೊನೆಯ ಕ್ಷಣಗಳನ್ನ ವಿವರಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಲತಾ ಮಂಗೇಶ್ಕರ್ ಅವರ ಆರೋಗ್ಯದ ಕುರಿತಾಗ ಸಮಸ್ಯೆಗಳನ್ನ ಡಾ.ಪ್ರತೀಕ್ ಸಮ್ದಾನಿ ನೋಡಿಕೊಳ್ಳುತ್ತಿದ್ದರು. ಲತಾ ಜೀ ಅವರ ಆರೋಗ್ಯ ಹದಗೆಟ್ಟಾಗ ನಾನು ಅವರಿಗೆ ಚಿಕಿತ್ಸೆ ನೀಡುತ್ತಿದ್ದೆ. ಆದರೆ ಅವರ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿತ್ತು. ಆದರೂ ನಾವು ನಮ್ಮ ಪ್ರಯತ್ನವನ್ನು ಮುಂದುವರೆಸಿದ್ದೆವು. ಆದರೆ ಅಂತಿಮವಾಗಿ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರು.
ಯಾವಾಗಲು ನಿಮ್ಮ ಆಸ್ಪತ್ರೆಗೆ ಬರುವ ರೋಗಿಗಳನ್ನ ಸಮಾನವಾಗಿ ನೋಡಿಕೊಳ್ಳಿ ಎಂದು ಲತಾ ಅವರು ಆಸ್ಪತ್ರೆಗೆ ದಾಖಲಾಗುವ ಮುನ್ನ ಹೇಳಿದ್ದರು. ಅವರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಚಿಕಿತ್ಸೆಯನ್ನ ತೆಗೆದುಕೊಳ್ಳಲು ಸದಾ ಸಿದ್ದರಿದ್ದರು. ಎಂದಿಗೂ ಹೆದರಿ ಅದರಿಂದ ದೂರ ಹೋಗಲಿಲ್ಲ. ಅವರು ಕೊನೆಯ ಕ್ಷಣದವರೆಗೂ ನಗುತ್ತಿದ್ದರು. ಅವರು ನಗುವನ್ನು ಜೀವನದುದ್ದಕ್ಕೂ ನೆನಪಿಟ್ಟುಕೊಳ್ಳುತ್ತೇನೆ ಎಂದು ಪ್ರತೀಕ್ ಸಮ್ದಾನಿ ಹೇಳಿದ್ದಾರೆ.




