ಪುನೀತ್ ಚಿತ್ರಕ್ಕೆ ಬರಬೇಕಿದ್ದ ಐಶ್ವರ್ಯಾ ರೈ ಮಿಸ್ ಆಗಿದ್ಹೇಗೆ?

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನ ಹೊಂದಿ ಮೂರು ತಿಂಗಳು ಕಳೆದಿದ್ರು ಅವರ ಬಗ್ಗೆ ಕೇಳಿ ಬರೋ ಸುದ್ದಿಗಳು ಮಾತ್ರ ನಿಂತಿಲ್ಲ. ಪುನೀತ್ ನಟನೆಯ ಒಂದೊಂದು ಸಿನಿಮಾದ ಹಿಂದೆಯೂ ಒಂದೊಂದು ಇಂಟ್ರೆಸ್ಟಿಂಗ್ ಮಾಹಿತಿ ಇದೆ. ಅದೇ ರೀತಿ ಅರಸು ಸಿನಿಮಾದ ಹಿಂದಿದ್ದ ಒಂದು ಇಂಟ್ರೆಸ್ಟಿಂಗ್ ಮಾಹಿತಿಯೊಂದನ್ನ ನಿರ್ದೇಶಕ ಮಹೇಶ್ ಬಾಬು ಬಿಚ್ಚಿಟ್ಟಿದ್ದಾರೆ.
ಅಪ್ಪು ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟ ಪುನೀತ್ ರಾಜ್ಕುಮಾರ್ ಬಳಿಕ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಪುನೀತ್ ನಟನೆಯ ಸಿನಿಮಾದಲ್ಲಿ ನಟಿಸೋಕೆ ಪರಭಾಷೆಯ ನಟಿಯರು ತುದಿಗಾಲಲ್ಲಿ ನಿಂತಿದ್ದರು. ಇದೇ ಕಾರಣಕ್ಕೆ ಪುನೀತ್ ನಟನೆಯ ಕೆಲ ಸಿನಿಮಾಗಳಲ್ಲಿ ಇತರ ಭಾಷೆಯ ನಟಿಯರು ನಟಿಸಿದ್ದಾರೆ. ಅಂದ್ಹಾಗೆ ಪುನೀತ್ ಅಭಿನಯದ ಅರಸು ಸಿನಿಮಾದಲ್ಲಿ ನಟಿಸೋಕೆ ಐಶ್ವರ್ಯ ರೈ ಬಚ್ಚನ್ ಗ್ರೀನ್ ಸಿಗ್ನಲ್ ನೀಡಿದ್ದರಂತೆ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ.
ಪುನೀತ್ ರಾಜ್ಕುಮಾರ್ ಹಾಗೂ ನಿರ್ದೇಶಕ ಮಹೇಶ್ ಬಾಬು ಕಾಂಬಿನೇಷನ್ನ ಮೊದಲ ಸಿನಿಮಾ ಆಕಾಶ್ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಇದೇ ಕಾರಣಕ್ಕೆ ಅರಸು ಚಿತ್ರವನ್ನ ಅದ್ದೂರಿಯಾಗಿ ಚಿತ್ರೀಕರಿಸಲು ಚಿತ್ರತಂಡ ಪ್ಲ್ಯಾನ್ ಮಾಡಿತ್ತು. ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಐಶ್ವರ್ಯ ರೈ ನಟಿಸ್ಬೇಕು ಅನ್ನೋದು ಚಿತ್ರತಂಡದ ಆಸೆಯಾಗಿತ್ತು. ಹೀಗಾಗಿ ಐಶ್ವರ್ಯ ರೈ ಕುಟುಂಬಕ್ಕೆ ಹತ್ತಿರವಾಗಿದ್ದ ಚಂದ್ರಶೇಖರ್ ಗುರೂಜಿ ಮೂಲಕ ಐಶ್ವರ್ಯ ರೈ ಅವರನ್ನ ಮಾತನಾಡಿಸಿದ್ದರಂತೆ.
ಅರಸು ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಐಶ್ವರ್ಯಾ ರೈ ನಟಿಸಬೇಕು ಕೇಳಿ ನೋಡಿ ಎಂದು ಅಣ್ಣವ್ರು ಚಂದ್ರಶೇಖರ್ ಗುರೂಜಿ ಬಳಿ ಹೇಳಿದ್ದರಂತೆ. ಅರಸು ಚಿತ್ರಕ್ಕೆ ಐಶ್ವರ್ಯಾರನ್ನ ಅಪ್ರೋಚ್ ಮಾಡಿದಾದ ಐಶ್ವರ್ಯ ಇಂಗ್ಲೀಷ್ನ ಪ್ರವೋಕ್ಡ್ ಅನ್ನೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಈ ಚಿತ್ರವನ್ನ ಸ್ವಿಡ್ಜರ್ಲ್ಯಾಂಡ್ನಲ್ಲಿ ಶೂಟಿಂಗ್ ಮಾಡಲಾಗುತ್ತಿತ್ತು. ಹೀಗಾಗಿ ಅರಸು ಚಿತ್ರತಂಡ ಅಲ್ಲಿಯೇ ಶೂಟಿಂಗ್ ಮಾಡಲು ಮುಂದಾಗಿತ್ತು. ಆದ್ರೆ ಐಶ್ವರ್ಯಾ ರೈ ಅವರ ಡೇಟ್ಸ್ ಹೊಂದಾಣಿಕೆ ಆಗಾದ ಕಾರಣಕ್ಕೆ ಚಿತ್ರತಂಡ ಕೊನೆಗೆ ಶ್ರೀಯಾ ಶರಣ್ ಅವರನ್ನ ಕರೆ ತಂದಿತ್ತು.




