ಮನರಂಜನೆಸಿನಿಮಾಸೆಲೆಬ್ರಿಟಿ

ಏಕ್ ಲವ್ ಯಾ ಸಿನಿಮಾ ವೀಕ್ಷಿಸಲು ಗಣ್ಯರಿಗೆ ಆಹ್ವಾನ ನೀಡದ ನಿರ್ದೇಶಕ ಪ್ರೇಮ್

ಏಕ್ ಲವ್ ಯಾ ಸಿನಿಮಾ ವೀಕ್ಷಿಸಲು ರಾಜಕೀಯದ ಹಲವು ಮುಖಂಡರಿಗೆ ಪ್ರೇಮ್ ಖುದ್ದಾಗಿ ಆಹ್ವಾನ ನೀಡಿದ್ದಾರೆ. ರಾಜಕೀಯ ಗಣ್ಯರಿಗೆ ಹೂಗುಚ್ಚ ನೀಡಿ ಸಿನಿಮಾ ವೀಕ್ಷಿಸಲು ಕೇಳಿಕೊಂಡಿದ್ದಾರೆ.

ಪ್ರೇಮ್ ಪತ್ನಿ ರಕ್ಷಿತಾ ಪ್ರೇಮ್ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ಜೊತೆಗೆ ಪ್ರೇಮ್ ಅವರಿಗೆ ರಾಜಕೀಯದ ಸಾಕಷ್ಟು ಗಣ್ಯರ ಜೊತೆ ವಿಶೇಷವಾದ ಒಡನಾಟವಿದೆ. ಇದೇ ಕಾರಣಕ್ಕೆ ಪ್ರೇಮ್ ರಾಜಕೀಯ ಗಣ್ಯರು ಹಾಗೂ ಚಿತ್ರರಂಗದವರಿಗೆ ಫೆ.23ರಂದು ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹೂ ಗುಚ್ಚ ನೀಡಿ ಚಿತ್ರ ವೀಕ್ಷಿಸಲು ಕೇಳಿಕೊಂಡಿದ್ದಾರೆ. ಸಿಎಂರಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಚಿತ್ರ ವೀಕ್ಷಿಸೋದಾಗಿ ಭರವಸೆ ನೀಡಿದ್ದಾರೆ.

ಕಾಂಗ್ರೆಸ್​​ನ ಹಿರಿಯ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಪ್ರೇಮ್ ಆಹ್ವಾನ ನೀಡಿದ್ದಾರೆ. ಈ ಸಂದರ್ಭದಲ್ಲಿ ತೆಗೆದ ಫೋಟೋಗಳನ್ನ ಪ್ರೇಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕೋವಿಡ್ ಕಾರಣದಿಂದ ಕುಗ್ಗಿರುವ ಕನ್ನಡ ಚಿತ್ರರಂಗಕ್ಕೆ ಬೆನ್ನೆಲುಬಾಗಿ ನಿಂತು ನಮ್ಮ ಏಕ್ ಲವ್ ಯಾ ಸಿನಿಮಾ ವೀಕ್ಷಣೆ ಮಾಡುವುದರ ಮೂಲಕ ಮತ್ತೆ ಕನ್ನಡಿಗರಲ್ಲಿ ಭಾಷಾಭಿಮಾನ ಹಾಗೂ ಚಿತ್ರರಂಗದ ಮೇಲಿನ ಪ್ರೀತಿಯನ್ನ ಹೆಚ್ಚಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ ನಿರ್ದೇಶನ ಪ್ರೇಮ್.

Spread the love

Related Articles

Leave a Reply

Your email address will not be published. Required fields are marked *

Back to top button