ತೆರೆಗೆ ಬರಲು ಸಿದ್ದವಾದ ಸರ್ಜಾ ಕೊನೆಯ ಸಿನಿಮಾ: ಈ ಸಿನಿಮಾ ಮೂಲಕ ಸರ್ಜಾ ಮಗನ ಎಂಟ್ರಿ

ನಟ ಚಿರಂಜೀವಿ ಸರ್ಜಾ ನಿಧನರಾಗಿ ಎರಡು ವರ್ಷ ಕಳೆಯುತ್ತಿದೆ. ಇದೀಗ ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ ಬಿಡುಗಡೆಗೆ ಸಿದ್ದವಾಗಿ ನಿಂತಿದೆ. ಕೆಲವೊಂದು ಕಾರಣಗಳಿಂದ ವಿಳಂಬವಾಗಿದ್ದ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಅಂದ್ಹಾಗೆ ಚಿರಂಜೀವಿ ಸರ್ಜಾರ ಕೊನೆಯ ಸಿನಿಮಾಗೆ ತಮ್ಮ ಧ್ರುವ ಸರ್ಜಾ ಕಂಠದಾನ ಮಾಡಿದ್ದಾರೆ.
ರಾಜಮಾರ್ತಾಂಡ. ನಟ ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ. ಕೆಲವು ಕಾರಣಗಳಿಂದ ವಿಳಂಬವಾಗಿದ್ದ ಸಿನಿಮಾ ಬಿಡುಗಡೆಗೆ ಎದುರು ನೋಡ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಹೊಸಕೆರೆಹಳ್ಳಿಯಲ್ಲಿರೋ ಶ್ರೀ ವರಸಿದ್ದಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಗಣ ಹೋಮ ಮಾಡಿಸಿದ್ದಾರೆ.
ಅಂದ್ಹಾಗೆ ಅಪ್ಪನ ಕೊನೆಯ ಸಿನಿಮಾದ ಮೂಲಕ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾನೆ. ಚಿತ್ರದಲ್ಲಿ ರಾಯನ್ ರಾಜ್ ಸರ್ಜಾ ಅಥಿತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾನೆ.
ರಾಜಮಾರ್ತಂಡ ಸಿನಿಮಾದ ಶೂಟಿಂಗ್ ಮುಗಿದಿದ್ದರೂ ಚಿತ್ರದ ಡಬ್ಬಿಂಗ್ ಕೆಲಸಗಳು ಮುಗಿಯುವ ಮುನ್ನವೇ ಚಿರಂಜೀವಿ ಸರ್ಜಾ ನಿಧನರಾಗಿದ್ದರು. ಹೀಗಾಗಿ ಚಿರಂಜೀವಿ ಸರ್ಜಾ ಅವರ ಪಾತ್ರಕ್ಕೆ ಚಿರು ಸಹೋದರ ಧ್ರುವ ಸರ್ಜಾ ಧ್ವನಿಯಾಗಿದ್ದಾರೆ.




