ಮನರಂಜನೆಸಿನಿಮಾ

ಜೇಮ್ಸ್ ನಲ್ಲಿ ಪುನೀತ್ ಪಾತ್ರಕ್ಕೆ ಶಿವರಾಜ್ ಕುಮಾರ್ ಧ್ವನಿ ..!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ ಹೊಂದಿ ಮೂರು ತಿಂಗಳು ಕಳೆದಿದೆ. ಆದರೂ ಕೂಡ ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಅಭಿಮಾನಿಗಳ ಸಾಗರ ಹರಿದು ಬರ್ತಿದೆ. ಅಷ್ಟೇ ಅಲ್ಲದೆ ಅಪ್ಪು ನೆನಪಿಗಾಗಿ ಅಭಿಮಾನಿಗಳು ಸಾಕಷ್ಟು ಸಮಾಜ ಕಾರ್ಯದಲ್ಲಿ ತೊಡಗಿದ್ದಾರೆ. ಇದೀಗ ಪುನೀತ್ ಕೊನೆಯ ಚಿತ್ರ ಜೇಮ್ಸ್. ಈ ಸಿನಿಮಾದ ಮೂಲಕ ಯುವರತ್ನನ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.

ಅಪ್ಪು ಬರ್ತಡೆ ಅಂದರೆ ಮಾರ್ಚ್ 17 ರಂದು ಗ್ಯ್ರಾಂಡ್ ಆಗಿ ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ ಜೇಮ್ಸ್ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಡಬ್ಬಿಂಗ್ ಕೆಲಸಗಳು ಮಾತ್ರ ಬಾಕಿ ಇತ್ತು. ಅಪ್ಪು ನಮ್ಮ ಅಗಲಿದ್ದರಿಂದ ಅವರ ಪಾತ್ರಕ್ಕೆ ಯಾರು ಧ್ವನಿ ಕೊಡುತ್ತಾರೆ ಎಂಬ ಕುತೂಹಲ ಕಾಡಿತ್ತು.

ಇದೀಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ.ಹೌದು. ಪುನೀತ್ ಪಾತ್ರಕ್ಕೆ ಸಹೋದರ ಶಿವರಾಜ್​ಕುಮಾರ್ ಡಬ್ ಮಾಡಿದ್ದಾರೆ. ಈ ಕುರಿತು ಸ್ವತಃ ಅವರೇ ಮಾಹಿತಿ ನೀಡಿದ್ದು, ಚಿತ್ರದ ಡಬ್ಬಿಂಗ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ನಟ ಶಿವರಾಜ್ ಕುಮಾರ್ ಅವರು ಎರಡು ದಿನಗಳ ಕಾಲ ಜೇಮ್ಸ್ ಚಿತ್ರದ ಡಬ್ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಡಬ್ ಮಾಡಿರುವುದ ತುಂಬಾ ಕಷ್ಟವಾಯಿತು. ತಮ್ಮನ ಮುಖ ನೋಡಿ ಧ್ವನಿ ನೀಡುವುದು ಬಹಳ ಸವಾಲಿನ ಕೆಲಸವಾಗಿತ್ತು. ಆದರೆ ಎಲ್ಲರೂ ಕೇಳಿದಾಗ ಇಲ್ಲ ಎನ್ನಲು ಆಗಲಿಲ್ಲ. ಡಬ್ ಮಾಡಿ ಮುಗಿಸಿದ್ದೇನೆ ಎಂದರು.

ಈ ಚಿತ್ರಕ್ಕೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಪುನೀತ್ ಗೆ ಜೋಡಿಯಾಗಿ ಪ್ರಿಯಾ ಆನಂದ್ ಬಣ್ಣಹಚ್ಚಿದ್ದಾರೆ. ಇತ್ತೀಚೆಗೆ ಗಣರಾಜ್ಯೋತ್ಸವದಂದು ಪುನೀತ್ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹೊಸ ಪೋಸ್ಟರ್​ ಅನ್ನು ಚಿತ್ರತಂಡ ರಿಲೀಸ್ ಮಾಡಿತ್ತು.

ಇದನ್ನು ಕಂಡು ಅಭಿಮಾನಿಗಳು ಸಖತ್ ಖುಷಿಯಾಗಿದ್ದರು. ಇದೀಗ ಚಿತ್ರದ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button