ಧೂಳೆಬ್ಬಿಸಿದ ‘ಶಿವಣ್ಣ 123’ ಹೊಸ ಪೋಸ್ಟರ್!

ಪೂರ್ಣ ವಿ-ರಾಮ
ನಟ ಶಿವರಾಜ್ ಕುಮಾರ್ ಬರ್ತ್ ಡೇಗೆ ಇನ್ನೇನು ಎರಡು ದಿನ ಬಾಕಿ ಇದೆ. ಒಂದು ಕಡೆ ಎ. ಹರ್ಷ ಭಜರಂಗಿ 2 ನಿರೀಕ್ಷೆಯಲ್ಲಿರುವವರಿಗೆ ಒಂದು ವಿಶೇಷ ಗಿಪ್ಟ್ ಕೊಡಲು ಅಣಿಯಾಗುತ್ತಿದ್ದರೆ, ಇನ್ನೊಂದು ಶಿವಣ್ಣನ 123ನೇ ಚಿತ್ರದ ತಂಡ ಇನ್ನೊಂದು ಪೋಸ್ಟರ್ ಬಿಟ್ಟು ಅಭಿಮಾನಿಗಳಿಗೆ ರಸದೂಟ ನೀಡುವ ಸೂಚನೆ ನೀಡಿದೆ!
ಗೋಡೆ ಮೇಲೆ ಹಾರಿ ಜಿಗಿದ ಶಿವ!
ಟಗರು ಚಿತ್ರದ ನಂತರ ಡಾಲಿ ಧನಂಜಯ ಮತ್ತು ಶಿವಣ್ಣ ಇನ್ನೊಂದು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಸಿನೆಮಾದ ಜೊತೆಗೆ ಇನ್ನೊಂದು ಪಿಕ್ಚರ್ ಕೂಡ ಮಾಡುತ್ತಿದ್ದಾರೆ ಎಂಬ ಸುದ್ದಿ ಓಡಾಡುತ್ತಿತ್ತು. ಆ ಸುದ್ದಿ ಇದೀಗ ಬ್ಲಾಸ್ಟ್ ಆಗುವ ಲಕ್ಷಣಗಳು ಕಾಣುತ್ತಿದ್ದು, ಶಿವರಾಜ್ ಕುಮಾರ್ ಗೋಡೆ ಮೇಲೆ ಕಾಲಿಟ್ಟು ಎದುರಾಳಿಗೆ ಒದೆಯೋ ಪೋಸ್ಟರ್ ವೈರಲ್ ಆಗಿದೆ. ಅವರ ಹಿಂದೆ ಕೈ ಎತ್ತಿ ತೋರುತ್ತಿರುವ ಆಕ್ಷನ್ ಇನ್ನಷ್ಟು ರೋಚಕತೆ ಮೂಡುವಂತೆ ಮಾಡಿದೆ.
ಬರ್ತ್ ಡೇಗೆ ಟೈಟಲ್!
ಶಿವರಾಜ್ ಕುಮಾರ್ ಅಭಿನಯದ ೧೨೩ನೇ ಚಿತ್ರವಾಗಿರೋ ಈ ಚಿತ್ರದ ಟೈಟಲ್ ಜುಲೈ ೧೨ಕ್ಕೆ ಲಾಂಚ್ ಆಗುತ್ತಿದ್ದು ವಿಜಯ್ ಮಿಲ್ಟನ್ ಈ ಚಿತ್ರದ ನಿರ್ದೇಶಕರು. ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಟೈಟಲ್ ಏನಿರಬಹುದು? ಜಸ್ಟ್ ವೇಯ್ಟ್…ಎರಡೇ ದಿನ ಬಾಕಿ!




