ಸಿನಿಮಾಸೆಲೆಬ್ರಿಟಿ

ಸಂಚಾರಿ ವಿಜಯ್ ರಸ್ತೆ ಅಪಘಾತಕ್ಕೆ ಇದೇ ಕಾರಣ!

ಪೂರ್ಣ ವಿ-ರಾಮ

ಇತ್ತೀಚೆಗಷ್ಟೇ ನಮ್ಮೆಲ್ಲರನ್ನ ಅಗಲಿದ ಆಗರ್ಭ ನಟ ಸಂಚಾರಿ ವಿಜಯ್ ರಸ್ತೆ ಅಪಘಾತಕ್ಕೆ ಇದೀಗ ಕ್ಲಾರಿಟಿ ಸಿಕ್ಕಿದೆ. ವಿಜಯ್ ಆತ್ಮೀಯ ಗೆಳೆಯ ನವೀನ್ ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು, ಮಾತ್ರೆ ತರುವ ಸಲುವಾಗಿ ಮನೆಗೆ ಹೊರಟೆ. ಅದಕ್ಕೂ ಮುಂಚೆ ಕೋವಿಡ್ ಕಿಟ್ ವಿತರಣೆ ಕುರಿತ ಮೀಟಿಂಗ್ ಇಟ್ಟುಕೊಂಡಿದ್ದೆವು. ಅದಾದ ನಂತರ ತನ್ನ ಪತ್ನಿ ಮಾತ್ರೆ ತರುವುದಕ್ಕೆ ಹೇಳಿದರು. ತಾನು ಹೊರಡುತ್ತೇನೆ ಎಂದಾಗ ಹತ್ತಿರದಲ್ಲೇ ಇರುವ ಮನೆಗೆ ಬಿಡುವಂತೆ ವಿಜಯ್ ಹೇಳಿದರು. ತೀರಾ ಸಮೀಪ ಇದ್ದ ಕಾರಣಕ್ಕೆ ಅವರು ಹೆಲ್ಮೆಟ್ ಧರಿಸಿರಲಿಲ್ಲ. ಗಾಡಿಯಲ್ಲಿ ಹೋಗುತ್ತಿದ್ದಾಗ ಗಾಡಿ ಸ್ಕಿಡ್ ಆಗಿದೆ ಎಂಬ ಮಾಹಿತಿ ನೀಡಿದ್ದಾರೆ ನವೀನ್!

ಸ್ಕಿಡ್ ಆಗಿ ಎಲೆಕ್ಟ್ರಿಕ್ ಪೋಲ್​ಗೆ ಹೊಡೆಯಿತು!
ಬೈಕ್ ನಲ್ಲಿ ಇಬ್ಬರೂ ಬರುತ್ತಿದ್ದಾಗ ಸಡನ್ ಸ್ಕಿಡ್ ಆಗಿದೆ. ಆದ ರಭಸಕ್ಕೆ ಬೈಕ್ ಅಲ್ಲೇ ಇದ್ದ ಇಲೆಕ್ಟ್ರಿಕ್ ಪೋಲ್ ಗೆ ಡಿಕ್ಕಿ ಹೊಡೆದಿದೆ. ಹೊಡೆತನ ರಭಸಕ್ಕೆ ವಿಜಯ್ ಅವರು ಗಾಡಿಯಿಂದ ಎಗರಿ ಬಿದ್ದಿದ್ದಾರೆ. ಬಿದ್ದ ಏಟಿಗೆ ತಲೆಗೆ ದೊಡ್ಡ ಪೆಟ್ಟುಬಿದ್ದಿದೆ ಎಂದು ಡೀಟೇಲ್ ಆಗಿ ನಡೆದ ಘಟನೆಯ ವಿವರ ತಿಳಿಸಿದ್ದಾರೆ ವಿಜಯ್ ಸ್ನೇಹಿತ ನವೀನ್.

ಅಂದಹಾಗೆ ಈ ಘಟನೆ ನಡೆದಿದ್ದು ಜುಲೈ 12ರಂದು. ಎರಡು ವಾರಗಳ ಕಾಲ ಬೆಡ್ ರೆಸ್ಟ್ ನಿಂದ ಚೇತರಿಸಿಕೊಂಡಿರುವ ಚೇತನ್, ಪೊಲೀಸರ ಮುಂದೆ ಘಟನೆಯ ಬಗ್ಗೆ ಹೇಳುವಾಗ ತುಂಬು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button