ಟಿವಿಸಿನಿಮಾಸೆಲೆಬ್ರಿಟಿ

ಬೆಂಕಿಯಾದ ಪಿಂಕಿ; ಶಾಕಿನಲ್ಲಿ ಚಂದ್ರಚೂಡ್!

ಪೂರ್ಣ ವಿ-ರಾಮ

ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ದೊಡ್ದ ದೊಡ್ಡಿಯಂತೆ ಆಗಿಬಿಟ್ಟಿದೆ. ಅವರ ಮೇಲೆ ಇವರು ದೂರೋದು. ಇವರ ಮೇಲೆ ಅವರು ದುರುದುರು ಅನ್ನೋದು. ಇವರಿಬ್ಬರ ಹೆಸರು ಸೇರಿಸಿ ಅವರಿಬ್ಬರು ಮಾತನಾಡೋದು. ಕೊನೆಗೆ ಇವರಿಬ್ಬರಿಗೆ ಅವರು ಮಾತನಾಡೋದು ಗೊತ್ತಾಗಿ ಅವರಿಬ್ಬರಿಗೂ ಸೇರಿಸಿ ಕೂಗಾಡೋದು…
ಒಟ್ಟಾರೆ ಬಿಗ್ ಬಾಸ್ ಮನೆ ಅನ್ಮೋದು ಜಾತ್ರೆಯಂತಾಗಿಬಿಟ್ಟಿದೆ!

ಪ್ರಿಯಾಂಕಾ ವರ್ಸಸ್ ಚಂದ್ರಚೂಡ್!
ಸದಾ ತಾಳ್ಮೆಯನ್ನೇ ಮೇಕಪ್ ರೀತಿಯಲ್ಲಿ ಹಚ್ಚಿಕೊಂಡಿದ್ದಾಳೇನೋ ಎನ್ನುವ ರೀತಿಯಲ್ಲಿ ಇರುತ್ತಿದ್ದ ಪ್ರಿಯಾಂಕಾ ತಿಮ್ಮೇಶ್ ಇದೀಗ ತಾಳ್ಮೆ ಕಳೆದುಕೊಂಡ ಕಾಳಿಯಮ್ಮನಂತಾಗಿಬಿಟ್ಟಿದ್ದಾರೆ! ಪತ್ರಕರ್ತ ಚಂದ್ರಚೂಡ್ ಚಕ್ರವರ್ತಿ ವಿರುದ್ಧ ಸಿಡಿಮಿಡಿಯಾಗಿದ್ದು, ಶಮಂತ್ ಹಾಗೂ ತಮ್ಮ ಬಗ್ಗೆ ಇನ್ನೊಂದು ಸಾರಿ ಮಾತನಾಡಿದರೆ ಎಚ್ಚರ ಚೂಡ ಎಚ್ಚರ ಎಂದಿದ್ದಾರೆ. ಕಣ್ಣು ಕೆಂಪಗೆ ಮಾಡಿಕೊಂಡು, ಹಲ್ಲು ಕಚ್ಚಿ ಅಚ್ಚರಿ ಮೂಡಿಸಿದ್ದಾರೆ!

ಕೂಲ್ ಹುಡುಗಿ ಕೆಂಡವಾದಳು!

ತಾನಾಯಿತು, ತನ್ನ ಸರ್ಕಲ್ ಆಯಿತು ಎನ್ನುವ ರೀತಿ ಇದ್ದ ಪ್ರಿಯಾಂಕಾ ತಿಮ್ಮೇಶ್ ಕುರಿತು ಚಕ್ರವರ್ತಿ ಚಂದ್ರಚೂಡ್ ಹೆವೀ ಕಾಮೆಂಟ್ ಮಾಡಲು ಶುರುಮಾಡಿದ್ದರು. ನೋಡುವಷ್ಟು ನೋಡಿದ ಪಿಂಕಿ ಇದೀಗ ಬೆಂಕಿ ಅವತಾರ ತಾಳಿರುವುದು ಇಡೀ ಮನೆಯ ಕಿಚ್ಚಿಗೆ ಇನ್ನಷ್ಟು ತುಪ್ಪ ಸುರಿದಂತಾಗಿದೆ. ಚಂದ್ರಚೂಡ್ ಅವರಿಗೆ ಎಲ್ಲೋ ಒಂದು ಕಡೆ ಪ್ರಿಯಾಂಕಾ ಉಗ್ರ ಅವತಾರ ಶಾಕ್ ನೀಡಿದೆ. ಚಂದ್ರಚೂಡ್ ಅವರ ಅವತಾರಕ್ಕೆ ತಕ್ಕ ಪ್ರತ್ಯುತ್ತರ ಅವರನ್ನು ತತ್ತರ ಮಾಡಿಬಿಟ್ಟಿದೆ!

Spread the love

Related Articles

Leave a Reply

Your email address will not be published. Required fields are marked *

Back to top button