ಸಿನಿಮಾಸೆಲೆಬ್ರಿಟಿ

ಪಂಚ ಭಾಷೆಯಲ್ಲಿ ಪಿರಂಗಿಪುರ; ಸಂಚಾರಿ ವಿಜಯ್ ಪಾತ್ರ ಪರಿಚಯದ ಮೊದಲ ವಿಡಿಯೋ ಅನಾವರಣ

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಬಹುನಿರೀಕ್ಷಿತ ಪಿರಂಗಿಪುರ ಚಲನಚಿತ್ರದ ಮೊದಲ ಪಾತ್ರ ಪರಿಚಯದ ಒಂದು ವಿಡಿಯೋ ಮತ್ತು ಪೋಸ್ಟರ್ ಜೊತೆ ‘ಸೈಲೆಂಟ್ ಸ್ಟಾರ್’ ಎಂಬ ಬಿರುದನ್ನು ಜು. 17ರಂದು ಸಂಚಾರಿ ವಿಜಯ್ ಜನ್ಮದಿನದಂದು ಪ್ರಿಸ್ವಿಸ್ ಸ್ಟುಡಿಯೋ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆ ಮಾಡುತ್ತಿದೆ. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಕಮರ್ಷಿಯಲ್ ಹೀರೋ ಆಗಿ 3 ಶೇಡ್​ಗಳಲ್ಲಿ ಕಾಣಿಸಿಕೊಳ್ಳುತ್ತಿದರು.

ಚಿತ್ರತಂಡ ಶೇ. 30ರಷ್ಟು ಚಿತ್ರೀಕರಣ ಮುಗಿಸಿದ್ದು, ಇದಕ್ಕೆ 2 ವರ್ಷಗಳಿಂದ VFX ತಂತ್ರಜ್ಞಾನದ ಮೂಲಕ ಕೋವಿಡ್​ಗೂ ಮುಂಚೆ ಪೂರ್ವಸಿದ್ಧತೆ ಮಾಡಿಕೊಂಡಿದ್ದರು. ಬಳಿಕ ಚಿತ್ರೀಕರಣ ಮುಂದೂಡಲಾಗಿತ್ತು. ಜೂನ್ 14ರಂದು ಸಂಚಾರಿ ವಿಜಯ್ ನಿಧನರಾದರು. ಅವರ ನೆನಪಿಗಾಗಿ ಚಿತ್ರತಂಡ ಒಂದು ವಿಡಿಯೋ ಮತ್ತು ಪೋಸ್ಟರ್ ಬಿಡುಗಡೆ ಮಾಡುತ್ತಿದೆ.

ಈ ಚಿತ್ರದಲ್ಲಿ ಬಹಳ ದೊಡ್ಡ ತಾರಾಗಣವಿದೆ. ಏಕಕಾಲದಲ್ಲಿ 5 ಭಾಷೆಗಳಲ್ಲಿ ತಯಾರಾಗುತ್ತಿರುವ, ಅತಿ ದೊಡ್ಡ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಬಹುತೇಕ VFX ಮತ್ತು Animation ಒಳಗೊಂಡಿರುವ ಚಿತ್ರ ಇದಾಗಿದೆ. ನಿರ್ದೇಶನ ಮತ್ತು ನಿರ್ಮಾಣದ ಹೊಣೆಯನ್ನು ಪ್ರಿಸ್ವಿಸ್ ಸ್ಟುಡಿಯೋದ ಜನಾರ್ಧನ್ ರೆಡ್ಡಿ ಮತ್ತು ತ್ರಿಪುಲ ಕ್ರಿಯೇಷನ್​ನವರು ವಹಿಸಿಕೊಂಡಿದ್ದಾರೆ.

ಸಂಚಾರಿ ವಿಜಯ್ ನಿಧನದಿಂದಾಗಿ, ಚಿತ್ರತಂಡ ಅವರ ಪಾತ್ರಕ್ಕೆ ಅರ್ಥ ಕೊಡುವ ಪಾತ್ರಧಾರಿಯನ್ನು ಸದ್ಯವೇ ನಿರ್ಧರಿಸಲಿದೆ ಎಂದು ನಿರ್ದೇಶಕ ಜನಾರ್ಧನ್ ರೆಡ್ಡಿ ತಿಳಿಸಿದ್ದಾರೆ. ಛಾಯಾಗ್ರಾಹಣ ಕೂನಪ್ಪ ರೆಡ್ಡಿ, ಸಂಗೀತ ಶ್ಯಾಮ್ ಎಲ್ ರಾಜ್, ಸಂಕಲನ ಸುರೇಶ್ ಅರಸ್, ಕಲೆ ಬಾಲಚಂದ್ರನ್,
ಸಾಹಸ ದಿನೇಶ್ ಸುಬ್ಬರಾಯನ್, VFX ಪ್ರಿಸ್ವಿಸ್ ಸ್ಟುಡಿಯೋ.

Spread the love

Related Articles

Leave a Reply

Your email address will not be published. Required fields are marked *

Back to top button