ಮನರಂಜನೆಸಿನಿಮಾಸೆಲೆಬ್ರಿಟಿ

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ಗೆ ಗೀತಾ ನಮನ

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಗಲಿ ಮೂರು ತಿಂಗಳು ಕಳೆದಿದೆ. ಆದರೆ ಇಂದಿಗೂ ಪ್ರತಿಯೊಬ್ಬರ ಹೃದಯದಲ್ಲಿ ಅಪ್ಪು ಅಜರಾಮರವಾಗಿದ್ದಾರೆ. ಪುನೀತ್ ನೆನಪು ಬಂದರೆ ಇಂದಿಗೂ ಕಣ್ಣಂಚು ಒದ್ದೆಯಾಗುತ್ತೆ. ಇದೀಗ ಖಾಸಗಿ ಟಿವಿ ತಂಡವೊಂದು ಪುನೀತ್ ಅವರಿಗೆ ಗೀತ ನಮಸ ಸಲ್ಲಿಸಿದ್ದು ಹಾಡು ನೋಡಿದ ಪ್ರತಿಯೊಬ್ಬರು ಅಪ್ಪ ನೆನೆದು ಕಣ್ಣೀರು ಹಾಕ್ತಿದ್ದಾರೆ. ಪ್ರೆಸ್​ ಕ್ಲಬ್​ನಲ್ಲಿ ನಡೆದ ಗೀತ ನಮನ ಕಾರ್ಯಕ್ರಮಕ್ಕೆ ನಟ ರಾಘವೇಂದ್ರ ರಾಜ್​ಕುಮಾರ್, ಪತ್ರಕರ್ತ ಸಂಘದ ಅಧ್ಯಕ್ಷ ಸದಾಶಿವ ಶೆಣೈ, ಮಹೇಂದ್ರ ವಿಕ್ರಮ್ ಹೆಗ್ಡೆ, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್, ನಾಗೇಂದ್ರ ಪ್ರಸಾದ್ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

ಹಾಡು ಬಿಡುಗಡೆ ಮಾಡಿ ಮಾತನಾಡಿದ ರಾಘವೇಂದ್ರ ರಾಜ್​ಕುಮಾರ್ ಅಪ್ಪು ಏಳು ವರ್ಷದ ಮಗುವಿದ್ದಾಗಲೇ ಹಾಡಲು ಶುರು ಮಾಡಿದ್ದರು. ಚಿಕ್ಕ ಹುಡುಗ ಇದ್ದಾಗಲೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡರು. ಹಿಟ್ಸ್ ಕೊಟ್ಟರು. ರಿಯಾಲಿಟಿ ಶೋ ಮಾಡಿದರು. ನನಗೆ ಮೈಂಡ್ ಬ್ಲಾಂಕ್ ಆಗಿದೆ. ಕೂತರು, ನಿಂತರು ಅಪ್ಪುನೇ ನೆನಪು ಆಗ್ತಾನೆ. ಈ ರೀತಿ ಹಾಡು ಕೇಳಿದರೆ ಅದರಿಂದ ಒಂದು ವಾರ ಹೊರಗಡೆ ಬರಲು ಆಗುವುದಿಲ್ಲ. ಅಷ್ಟು ಡೀಪ್ ಆಗಿ ಒಳಗಡೆ ಹೋಗುತ್ತೇವೆ ಎಂದು ಅಗಲಿದ ತಮ್ಮನನ್ನು ನೆನೆದು ಭಾವುಕರಾದರು.

ಲಾಲಿ ಲಾಲಿ ಮಗಲು ರಾಜಕುಮಾರ ಹಾಡಿನ ಸಾಹಿತ್ಯವನ್ನ ವಿ.ನಾಗೇಂದ್ರ ಪ್ರಸಾದ್ ಬರೆದಿದ್ದು, ಅರ್ಜನ್ ಜನ್ಯ ಸಂಗೀತ ನೀಡಿದ್ದಾರೆ. ರಾಜೇಶ್ ಕೃಷ್ಣನ್ ಹಾಡಿಗೆ ಧ್ವನಿಯಾಗಿದ್ದು ಕೇಳುಗರ ಕಣ್ಣಂಚನ್ನ ಒದ್ದೆ ಮಾಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button