
ಭಾರತೀಯ ಚಿತ್ರರಂಗದ ಪ್ರಮುಖ ಗಾಯಕ ಕೆ.ಜೆ.ಯೇಸುದಾಸ್ ಅವರು ಇಂದು 82ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. ಪ್ರತಿವರ್ಷವೂ ಕೊಲ್ಲೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿಗೆ ಅರ್ಚನೆ ಸಲ್ಲಿಸಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಯೇಸುದಾಸ್ ಈ ಬಾರಿ ಕೊರೊನಾ ನಿರ್ಭಂಧದಿಂದ ದೇವಿಯ ದರ್ಶನ ಪಡೆಯುವುದು ಅನುಮಾನವಾಗಿದೆ.
ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ 10 ಭಾಷೆಯಲ್ಲಿ ಸಾವಿರಾರು ಹಾಡುಗಳು ಯೇಸುದಾಸ್ ಕಂಠ ಸಿರಿಯಲ್ಲಿ ಮೂಡಿ ಬಂದಿದೆ. ಹಂಸಲೇಖ ಜೊತೆ ಸಾಕಷ್ಟು ಗೀತೆಗಳಿಗೆ ಧನಿಯಾದ ಯೇಸುದಾಸ್ ನೂರಾರು ಭಕ್ತಿ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಯೇಸುದಾಸ್ ಕಂಠ ಸಿರಿಯಲ್ಲಿ ಮೂಡಿ ಬಂದಿದ್ದ ಮಲಯ ಮಾರುತ ಸಿನಿಮಾದ ಎಲ್ಲೆಲ್ಲೂ ಸಂಗೀತವೇ, ರಾಮಾಚಾರಿ ಸಿನಿಮಾದ ನಮ್ಮೂರ ಯುವರಾಣಿ ಕಲ್ಯಾಣವಂತೆ, ರಾಮಚಾರಿ ಹಾಡುವ ಲಾಲಿ ಹಾಡ ಕೇಳವ್ವ, ಪ್ರೀತ್ಸೋದ್ ತಪ್ಪಾ ಚಿತ್ರದ ಬಂಗಾರದಿಂದ ಬಣ್ಣಾನ ತಂದ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಹಾಡುಗಳು ಇದೀಗ ಎವರ್ ಗ್ರೀನ್ ಹಾಡುಗಳಾಗಿವೆ.



