ಮನರಂಜನೆಸಿನಿಮಾಸೆಲೆಬ್ರಿಟಿ
ಶಕ್ತಿಧಾಮದ ಮಕ್ಕಳಿಗೆ ತಾಯಿಯ ಸ್ಥಾನ ನೀಡಿದ ಗೀತಾ ಶಿವರಾಜ್ಕುಮಾರ್

ನಟ ಪುನೀತ್ ರಾಜ್ಕುಮಾರ್ ನಿಧನದ ಬಳಿಕ ಮೈಸೂರಿನ ಶಕ್ತಿಧಾಮದ ಜವಬ್ದಾರಿಯನ್ನ ನಟ ಶಿವರಾಜ್ ಕುಮಾರ್ ದಂಪತಿಗಳು ವಹಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಆಗಾಗ ಶಿವಣ್ಣ ದಂಪತಿಗಳು ಮೈಸೂರಿಗೆ ಹೋಗಿ ಬರುತ್ತಿರುತ್ತಾರೆ. ಇದೀಗ ಶಿವಣ್ಣ ಶಕ್ತಿಧಾಮ ಹಾಗೂ ತಮ್ಮ ಪತ್ನಿ ಗೀತಾ ಬಗ್ಗೆ ಮಾತನಾಡಿದ್ದಾರೆ.
ನಮಗೆ ಮೈಸೂರು ಹೊಸದಲ್ಲ. ಗೀತಾ ಅವರು ಶಕ್ತಿಧಾಮದಲ್ಲಿ ತಾಯಿಯ ಸ್ಥಾನದಲ್ಲಿ ಕೂತಿದ್ದಾರೆ. ಅವರಿಗೆ ಜವಾಬ್ದಾರಿ ಜಾಸ್ತಿ ಇದೆ. ಹಾಗಾಗಿ ಅವರು ಆಗಾಗ ಬೆಂಗಳೂರಿನಿಂದ ಮೈಸೂರಿಗೆ ಬರಬೇಕಾಗುತ್ತದೆ. ಮೀಟಿಂಗ್ಗಳು ಇರುತ್ತವೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಬೇಕು ಎಂದಿದ್ದಾರೆ.
ಮಕ್ಕಳಿಗೆ ಗೀತಾ ಅವರೇ ಪಾಠ ಮಾಡುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಮೈಸೂರಿನ ಜೊತೆಗಿನ ನಮ್ಮ ಬಾಂಧವ್ಯ ಜಾಸ್ತಿ ಆಗುತ್ತಿದೆ. ಅದು ಎಂದಿಗೂ ಕಡಿಮೆ ಆಗುವುದಿಲ್ಲ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.




