ಸಿನಿಮಾಸೆಲೆಬ್ರಿಟಿ

ಮೂತ್ರಕೋಶದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ ನಟ, ನಿರ್ದೇಶಕ ಮಹೇಶ್ ಮಂಜ್ರೇಕರ್

ನಟ, ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರು ಇತ್ತೀಚೆಗೆ ಮೂತ್ರಕೋಶದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬುದಾಗಿ ವರದಿಯಾಗಿದೆ.

ಅವರಿಗೆ ಸುಮಾರು 10 ದಿನಗಳ ಹಿಂದೆ ಮುಂಬೈನ ಹೆಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಹಾಗಾಗಿ ನಟ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇದ್ದು, ಈಗ ಮನೆಗೆ ಮರಳಿದ್ದಾರೆ ಮತ್ತು ಚೇತರಿಸಿಕೊಂಡಿದ್ದು, ಈಗ ಆರೋಗ್ಯವಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಮಹೇಶ್ ಮಂಜ್ರೇಕರ್ ಅವರು ‘ಆಂಟಿಮ್ : ದಿ ಫೈನಲ್ ಟ್ರುತ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು., ಇದರಲ್ಲಿ ಸಲ್ಮಾನ್ ಖಾನ್ ಪೊಲೀಸ್ ಆಗಿ ಮತ್ತು ಆಯುಷ್ ಶರ್ಮಾ ದರೋಡೆಕೋರನಾಗಿ ನಟಿಸಿದ್ದಾರೆ. ಇದಲ್ಲದೇ ಅವರು ಇತ್ತೀಚೆಗೆ ‘ವೈಟ್’ ಎಂಬ ಹೊಸ ಚಿತ್ರವನ್ನು ಫೋಷಿಸಿದ್ದರು. ಇದನ್ನು ಸಂದೀಪ್ ಸಿಂಗ್ ಮತ್ತು ರಾಜ್ ಶಂಡಲಿಯಾ ಜಂಟಿಯಾಗಿ ನಿರ್ಮಿಸಲಿದ್ದಾರೆ ಎನ್ನಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button