ಕರೀನಾ ಕಪೂರ್ ಫಿಟ್ ಮತ್ತು ಸ್ಲಿಮ್ ಆಗಿರಲು ಈ ಒಂದು ವಸ್ತುವನ್ನು ಸೇವಿಸುತ್ತಾರಂತೆ

ಬೆಳ್ಳಿ ಪರದೆಯ ತಾರೆಯರ ಫಿಟ್ ನೆಸ್ ವಿಷಯಕ್ಕೆ ಬಂದಾಗ ಕರೀನಾ ಕಪೂರ್ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. ಜೀರೊ ಸೈಜ್ ನಲ್ಲಿ ಪ್ರಸಿದ್ಧರಾದ ನಟಿ ಕರೀನಾ ಕಪೂರ್ ಇಬ್ಬರು ಮಕ್ಕಳಾದರೂ ಇಂದಿಗೂ ಹಾಗೇ ಇದ್ದಾರೆ. ಹಾಗಾಗಿ ಅವರ ಫಿಟ್ ನೆಸ್ ರಹಸ್ಯ ಏನು ಎಂಬ ಕುತೂಹಲ ಹಲವರಿಗಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಎಲ್ಲಾ ಸೆಲೆಬ್ರಿಟಿಗಳಂತೆ ಕರೀನಾ ಅವರು ಅಕ್ಕಿ, ತುಪ್ಪದಿಂದ ದೂರವಿರುವಂತೆ ಸಲಹೆ ನೀಡುವುದಿಲ್ಲ. ಅವರು ತಿಂಡಿ ತಿನ್ನಲು ಬಯಸಿದಾಗ, ಹಸಿವಾದಾಗ ಅವರು ಮಖಾನಾ ತಿನ್ನುತ್ತಾರಂತೆ. ಮಖಾನದಲ್ಲಿ ಕ್ಯಾಲೋರಿ ಕಡಿಮೆ ಇದೆ. ಇದರಲ್ಲಿ ಫೈಬರ್ ಹೆಚ್ಚಿನ ಪ್ರಮಾಣದಲ್ಲಿದೆ. ಅಲ್ಲದೇ ಇದರಲ್ಲಿ ಮೆಗ್ನೀಶಿಯಂ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ.
ಇದು ಹೃದಯ ಆರೋಗ್ಯವೂ ಉತ್ತಮವಾಗಿರುತ್ತದೆ. ಇದನ್ನು ಯಾವುದೇ ಸಮಯದಲ್ಲಿ ತೆಗೆದುಕೊಳ್ಳಬಹುದು. ಅವು ಅಂಟು ರಹಿತವಾಗಿರುತ್ತದೆ. ಮತ್ತು ಸುಕ್ಕುಗಳನ್ನು ನಿವಾರಿಸುತ್ತದೆ. ಕರೀನಾ ಅವರು ಮಕಾನಾವನ್ನು ಸ್ವಲ್ಪ ತುಪ್ಪ ಹಾಕಿ ಹುರಿಯುತ್ತಾರೆ. ಹಾಗೇ ಅದಕ್ಕೆ ರುಚಿಗೆ ಕಪ್ಪು ಉಪ್ಪು, ಕರಿಮೆಣಸು, ಚಾಟ್ ಮಸಾಲಾ ಮಿಕ್ಸ್ ಮಾಡಿ ಸೇವಿಸುತ್ತಾರಂತೆ ಇದು ಆರೋಗ್ಯಕ್ಕೆ ಉತ್ತಮ ಎಂದು ಅವರು ತಿಳಿಸಿದ್ದಾರೆ




