ಟಿವಿಸಿನಿಮಾ

ಬಿಗ್ ಬಾಸ್: ಚಂದ್ರಚೂಡ್ vs ಮಂಜು ಪಾವಗಡ!

ಪೂರ್ಣ ವಿ-ರಾಮ

ಹೊರಗಡೆ ಹಚ್ಚಿದ ಬೆಂಕಿ ಕಿಡಿ ಇದೀಗ ಒಳಗಡೆ ಬುಗಿಲೆದ್ದಿದೆ. ನಲವತ್ತೆರಡು ದಿನಗಳ ಕೊರೋನಾ ಮದ್ಯಂತರ ಬ್ರೇಕ್ ಬಳಿಕ ಇದೀಗ ಮತ್ತೆ ಎಲ್ಲರನ್ನು ಮನೆ ಒಳಗೆ ಕೂಡಿ ಹಾಕಿರುವುದು ದೊಡ್ಡ ನ್ಯೂಸ್ ಆಗಿದೆ. ಹೊರಗಿದ್ದಾಗ ಯಾರೆಲ್ಲಾ ಏನೇನು ಮಾತನಾಡಿದರು ಎನ್ನುವುದನ್ನು ನೋಡಿಕೊಂಡು ಮತ್ತೆ ದೊಡ್ಮನೆ ಸೇರಿರುವ ಕಂಟಸ್ಟೆಂಟ್ ಗಳು ಒಬ್ಬರ ಮೇಲೆ ಒಬ್ಬರು ಕೆಂಡ ಕಾರುತ್ತಿದ್ದಾರೆ!

ಮಜಾ ಬೇರೆ, ಮಂಜಾ ಬೇರೆ-ಚಕ್ರವರ್ತಿ!
ಪತ್ರಕರ್ತ ಚಂದ್ರಚೂಡ್ ಹಾಗೂ ಮಜಾ ಭಾರತ ಖ್ಯಾತಿಯ ಮಂಜು ನಡುವೆ ದೊಡ್ಡ ಜಟಾಪಟಿ ಶುರುವಾಗಿದ್ದು, ನಿರೂಪಕ ಸುದೀಪ್ ಸಮ್ಮುಖದಲ್ಲಿಯೇ ಇಬ್ಬರೂ ಕೂಗಾಡಿಕೊಂಡು, ಕಿತ್ತಾಡಿಕೊಂಡಿದ್ದಾರೆ. ದಿವ್ಯಾ ಸುರೇಶ್ ಹಾಗೂ ಮಂಜು ಆಡಿದ್ದು ಕೇವಲ ಆಟವಾ? ಅಥವಾ ಗಂಡ ಹೆಂಡತಿಯೇ ಆಗಿಬಿಟ್ಟಿದ್ದಾರಾ ಎಂದು ಚಂದ್ರಚೂಡ್ ಹೊರಗಡೆ ಹೋದಾಗ ಮಾತನಾಡಿದ್ದಕ್ಕೆ ಮಂಜು ಉರಿಬಿದ್ದು ಹೋಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ!

ಗಳಗಳೇಶ್ವರಿಯಾದ ದಿವ್ಯಾ!
ಖಾಸಗಿ ವಾಹಿನಿ ಹೊರಬಿಟ್ಟಿರುವ ಪ್ರೊಮೋ ಒಂದರಲ್ಲಿ ಚಂದ್ರಚೂಡ್-ಮಂಜು ಹೆವೀ ಕಿತ್ತಾಟ ಮಾಡಿಕೊಂಡಿದ್ದಾರೆ. ಸುದೀಪ್ ಮುಂದೆಯೇ ಮಾತಿನ ಚಕಮಕಿ ಮಾಡಿಕೊಂಡು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಿಗ್ ತಿರುವು ನೀಡಿದ್ದಾರೆ. ಈ ಸಮಯದಲ್ಲಿ ಮಂಜು ‘ಜೊತೆಗಾರ್ತಿ’ ದಿವ್ಯಾ ಸುರೇಶ್ ಲೀಟರ್ ಗಟ್ಟಲೇ ಕಣ್ಣೀರು ಸುರಿಸುವ ಮೂಲಕ ಉರಿಯೋ ಬೆಂಕಿಗೆ ತೊಂಬತ್ತು ಕೇಜಿ ತುಪ್ಪ ಸುರಿದಿದ್ದಾರೆ! ಚಂದ್ರಚೂಡ್ ಮತ್ತು ಮಂಜು ಪಾವಗಡನ ಇಡಿ ಜಗಳವನ್ನ ನೋಡುತ್ತಿದ್ದರೂ ಸುದೀಪ್ ಯಾಕೆ ಸುಮ್ಮನಿದ್ದಾರೆ? ದಿವ್ಯಾ ಸುರೇಶ್ ಮೇಕಪ್ ಮುಖ ಅದ್ಯಾಕೆ ಅಷ್ಟೊಂದು ಒದ್ದೆಯಾಗಿದೆ?

ಬಲ್ಲ ಮೂಲಗಳ ಪ್ರಕಾರ ಬಿಗ್ ಬಾಸಷ್ಟೇ ಬಲ್ಲ!

Spread the love

Related Articles

Leave a Reply

Your email address will not be published. Required fields are marked *

Back to top button