ಸಿನಿಮಾಸೆಲೆಬ್ರಿಟಿ

ಅರುಣಾ ಕುಮಾರಿ ಪ್ರಕರಣ: ಹೊಸ ಟ್ವಿಸ್ಟ್!

ಮೂರು ದಿನಗಳ ಕಾಲ ಚರ್ಚೆ ಆಗುತ್ತಿದ್ದ ದರ್ಶನ್ ಹಾಗೂ ಆಪ್ತ ವಲಯದ ಕಲಹ ಪ್ರಕರಣಕ್ಕೆ‌ ಗೀತ ಸಾಹಿತಿ‌ ವಿ‌ ನಾಗೇಂದ್ರ ಪ್ರಸಾದ್ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ!
ತಮ್ಮ ಸ್ನೇಹಿತ ನಾಗವರ್ಧನ್ ಎಂಬ ಹೊಸ ವ್ಯಕ್ತಿಯ ಮೂಲಕ ಅರುಣಾ ಕುಮಾರಿ ಅವರಿಂದ ತಾನೂ ಮೋಸ ಹೋಗಿದ್ದೆ ಎಂಬ ವಿಷಯ ಹೊರಹಾಕಿದ್ದಾರೆ.

ಅರುಣಾ ಕುಮಾರಿ ಅಲ್ಲ, ನಂದಿತಾ!

2015ರ ಸುಮಾರಿಗೆ ಇದೇ ಅರುಣಾ ಕುಮಾರಿ ನಂದಿತಾ ಎಂಬ ಹೆಸರಿನಿಂದ ನಾಗವರ್ಧನ್ ಅವರಿಗೆ ಪರಿಚಯ ಆದರಂತೆ.‌ ಸಿನೆಮಾ ನಿರ್ಮಾಣ ಮಾಡುವ ಭರವಸೆ ನೀಡಿ, ನೀವೇ ಹೀರೋ ಆಗಿ ಅಂದರಂತೆ. ನಂತರ ಸಿನೆಮಾ ಇಂದ ರಿಯಲ್ ಎಸ್ಟೇಟ್ ವ್ಯಹಹಾರಕ್ಕೆ ತಿರುಗಿದ ನಂದಿತಾ, ರವಿಶಂಕರ್ ಗುರೂಜಿ ಆಶ್ರಮದ ಬಳಿ‌ ಹನ್ನೆರಡು ಕೋಟಿ ಜಾಗ ಇದೆ ಎಂದರಂತೆ. ಅದೇ ಸಮಯದಲ್ಲಿ ತನಗೆ ತನ್ನ ಮನೆ ಕಡೆಯಿಂದ ಬೆದರಿಕೆ ಇದೆ. ಹೀಗಾಗಿ ಸಿಕ್ಕಾಪಟ್ಟೆ ಹೆದರಿದ್ದೀನಿ ಅಂತ ಕಥೆ ಕಟ್ಟಿ ನಾಗವರ್ಧನ್ ಜೊತೆ ಮೂರು ತಿಂಗಳು ಬೇರೊಂದು ಕಡೆ ಇದ್ದರಂತೆ. ಅವರಿಗೆ ತೊಂದರೆ ಆಗಿದೆ ಅಂತ ನಾಗಣ್ಣ ಆರು ಲಕ್ಷ ಗೋಲ್ಡ್ ಕೊಟ್ಟರಂತೆ. ತದನಂತರ ಸ್ನೇಹಿತರ ಕಡೆಯಿಂದ ಒಂದು ಲಕ್ಷ ಕ್ಯಾಶ್ ಕೊಡಿಸಿದರಂತೆ. ಕೊನೆಗೆ ನಾಗ್ ಅವರಿಗೆ ಆಕೆ ಮೋಸಗಾರ್ತಿ ಎನ್ನುವ ವಿಷಯ ಗೊತ್ತಾಗಿ ಬ್ಯಾಟರಾಯನಪುರದಲ್ಲಿ ಪೊಲೀಸ್ ಕಂಪ್ಲೀಟ್ ಮಾಡಿದರಂತೆ. ಕಂಪ್ಲೇಂಟ್ ಕೊಟ್ಟಿದ್ದು ನಾಗ್ ಅವರ ಪತ್ನಿಯಂತೆ.ತನ್ನ ಗಂಡ ಮಿಸ್ಸಿಂಗ್ ಅಂತ ದೂರು ಕೊಟ್ಟರಂತೆ. ತನ್ನ ಪತಿ ವಾಪಾಸಾದರು ಅಂತ ದೂರು ವಾಪಸ್ ಪಡೆದರಂತೆ. ಅದೇ ನಂದಿತಾ ಅವರೇ ಈಗ ಅರುಣಾ ಕುಮಾರಿ ಆಗಿರುವ ವಿಷಯ ಗೊತ್ತಾಗಿ, ನಾಗಣ್ಣನವರು ಇದೀಗ ಆ ವಿಷಯವನ್ನು ಗೆಳೆಯರಾದ ನಾಗೇಂದ್ರ ಪ್ರಸಾದ್ ಅವರ ಗಮನಕ್ಕೆ ತಂದು, ಇವತ್ತು ಪತ್ರಿಕಾಗೋಷ್ಠಿ ಕರೆದರಂತೆ! ಈ ರಲ್ಲಾ ಅಂತೆ ಕಂತೆಗಳು ಆಗಿದ್ದು ಆರು ವರುಷದ ಹಿಂದೆಯಂತೆ. ಇದನ್ನೆಲ್ಲಾ ನಾವು ಕೇಳಿ ಶಾಕ್ ಆಗಬೇಕಂತೆ. ಈ ಮಹಿಳೆಯಿಂದ ನಾಗ್ ಅವರು ಹಣ ಮತ್ತು ಸ್ನೇಹಿತರನ್ನೂ ಕಳೆದುಕೊಂಡರಂತೆ. ಅದೇ ಕಾರಣಕ್ಕೆ ಅವರು ಈ ವಿಷಯವನ್ನು ದರ್ಶನ್ ಹಾಗೂ ಉಮಾಪತಿ ಅವರ ಗಮನಕ್ಕೆ ತಂದರಂತೆ!

Spread the love

Related Articles

Leave a Reply

Your email address will not be published. Required fields are marked *

Back to top button