ಮನರಂಜನೆಸಿನಿಮಾ

ಜೂ ಎನ್ ಟಿ ಆರ್ ಗೆ ಜೋಡಿಯಾದ ನಟಿ ರಶ್ಮಿಕಾ ಮಂದಣ್ಣ

ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ತಿರೋ ರಶ್ಮಿಕಾ ಇದೀಗ ಯಂಗ್ ಟೈಗರ್ ಜ್ಯೂ.ಎನ್ ಟಿ ಆರ್ ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ.

ಆರ್ ಆರ್ ಆರ್ ಚಿತ್ರದ ಸಕ್ಸಸ್ ನಂತರ ಯಂಗ್ ಟೈಗರ್ ಜ್ಯೂ.ಎನ್ಟಿಆರ್ ಕೊರಟಾಲ ಶಿವ ನಿರ್ದೇಶನದ ಹೊಸ ಚಿತ್ರದಲ್ಲಿ ಕಾಣಸಿಕೊಳ್ಳಲು ಸಜ್ಜಾಗಿದ್ದು, ಜ್ಯೂ.ಎನ್ಟಿಆರ್ಗೆ ನಾಯಕಿಯಾಗಿ ಈ ಹಿಂದೆ ನಟಿ ಆಲಿಯಾ ಭಟ್ ಆಯ್ಕೆಯಾಗಿದ್ದರು. ಆದ್ರೆ ಇದೀಗ ಆಲಿಯಾ ಭಟ್ ಜಾಗಕ್ಕೆ ನಟಿ ರಶ್ಮಿಕಾ ಎಂಟ್ರಿಯಾಗಿದ್ದಾರೆ.

ರಾಜಮೌಳಿ ನಿರ್ದೇಶನದ RRR’ ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ ಜೂ ಎನ್ ಟಿ ಆರ್ ಗೆ ಹೊಸ ಚಿತ್ರದಲ್ಲಿ ನಟಿಸಲು ಭರ್ಜರಿ ತಯಾರಿ ನಡೆಯುತ್ತಿದೆ.RRR’ ಚಿತ್ರದ ಮೂಲಕ ಟಾಲಿವುಡ್ಗೆ ನಾಯಕಿಯಾಗಿ ಎಂಟ್ರಿಕೊಟ್ಟ ಬಿಟೌನ್ ಬ್ಯೂಟಿ ಆಲಿಯಾ ಭಟ್ ಕಾರಣಾಂತರಗಳಿಂದ ಜ್ಯೂ.ಎನ್ಟಿಆರ್ ಚಿತ್ರದಿಂದ ಹೊರನಡೆದಿದ್ದು, ಆ ಜಾಗಕ್ಕೆ ರಶ್ಮಿಕಾ ಎಂಟ್ರಿಕೊಟ್ಟಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button