ಮನರಂಜನೆಸಿನಿಮಾಸೆಲೆಬ್ರಿಟಿ
Actor Vijay: ವಿಜಯ್ ‘ತಲಪತಿ 66’ ಚಿತ್ರದಲ್ಲಿ ನಟಿಸಲಿದ್ದಾರೆ ಟಾಲಿವುಡ್ ನ ಈ ಸ್ಟಾರ್ ನಟನ ಮಗಳು

ತಮಿಳು ನಟ ವಿಜಯ್ ಅವರ ಮುಂದಿನ ಚಿತ್ರದಲ್ಲಿ ತೆಲುಗು ನಿರ್ದೇಶಕ ವಂಶಿ ಪೈಡಿಪಲ್ಲಿ ಅವರು ಕೈಜೋಡಿಸಲಿದ್ದಾರೆ. ಈ ಚಿತ್ರವು ಶೀಘ್ರದಲ್ಲಿಯೇ ಆರಂಭವಾಗಲಿದೆ. ಇದು ಪ್ರಣಯ ಮತ್ತು ಹಾಸ್ಯ ತುಂಬಿದ ಚಿತ್ರವಾಗಿದೆ. ಇತ್ತೀಚಿನ ವರದಿಯ ಪ್ರಕಾರ ಮಹೇಶ್ ಬಾಬು ಅವರ ಮಗಳು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಮಹೇಶ್ ಬಾಬು ಅವರ ಮಗಳು ಸಿತಾರಾ ಅವರನ್ನು ವಿಜಯ್ ಅವರ ‘ತಲಪತಿ 66’ ಚಿತ್ರದಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸಲಿದ್ದಾರೆ . ಅವಳನ್ನು ಪ್ರಮುಖ ಪಾತ್ರಕ್ಕಾಗಿ ಹಾಕಲು ನಿರ್ಮಾಪಕರು ಯೋಜಿಸಿದ್ದಾರೆ. ಈ ಬಗ್ಗೆಮಹೇಶ್ ಬಾಬು ಅವರ ಜೊತೆ ಮಾತುಕತೆ ನಡೆಯುತ್ತಿದೆ. ನಟ ಓಕೆ ಎನ್ನುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
ವಿಜಯ್ ಮತ್ತು ಮಹೇಶ್ ಬಾಬು ಅವರು ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಮಹೇಶ್ ಬಾಬು ಅವರ ಒಂದೆರಡು ಚಿತ್ರವನ್ನು ತಮಿಳಿಗೆ ರಿಮೇಕ್ ಮಾಡಲಾಗಿದೆ. ಹಾಗೇ ಮಹೇಶ್ ಬಾಬು ಅವರು ಈ ಹಿಂದೆ ವಿಜಯ್ ಅವರನ್ನು ಗ್ರೀನ್ ಇಂಡಿಯಾ ಚಾಲೆಂಜ್ ಸ್ವೀಕರಿಸಲು ಆಹ್ವಾನಿಸಿದ್ದರು.




